ಪುತ್ತೂರು : ನಕಲಿ ಜ್ಯೋತಿಷಿಯೊಬ್ಬ ಜನರಿಂದ ಹಣ ಪಡೆದು ವಂಚಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯದ ವ್ಯಕ್ತಿ ಜ್ಯೋತಿಷಿಯಂತೆ ನಟಿಸಿದನ್ನು ಹಲವಾರು ಮಂದಿ ನಂಬಿದ್ದರು. ಹಣ ಕೊಟ್ಟ ಬಳಿಕ ಅವರಿಗೆ ಮೋಸದ ಅರಿವಾಗಿದೆ ಎಂದು ಹೇಳಲಾಗಿದೆ. ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಜ್ಯೋತಿಷಿ ಹಲವಾರು ಜನರಿಂದ ಹಣ ತೆಗೆದುಕೊಂಡು ವಂಚನೆ ಮಾಡಿದ್ದರಿಂದ , ಅವರು ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ನಕಲಿ ಜ್ಯೋತಿಷಿ ಗೂಗಲ್ ಪೇ ಮೂಲಕ ಹಣವನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜ್ಯೋತಿಷಿ ಗೂಗಲ್ ಪೇ ಮೂಲಕವೆ ಹಣ ಮರುಪಾವತಿ ಮಾಡಿದ್ದಾರೆ
ವಿಡಿಯೋದಲ್ಲಿ, ಮಹಿಳೆಯೋರ್ವರು ಮನೆಯಿಂದ ಚಿನ್ನಾಭರಣ ತಂದು ಅಡ ಇಟ್ಟು ಜ್ಯೋತಿಷಿಗೆ ಹಣ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಯಾರೂ ಕೂಡಾ ನಕಲಿ ಜ್ಯೋತಿಷಿಯ ವಿರುದ್ದ ದೂರು ದಾಖಲಿಸಿಲ್ಲ ಎನ್ನಲಾಗಿದೆ.
Click this button or press Ctrl+G to toggle between Kannada and English
November 21st, 2020 at 10:41:24
ಇಷ್ಟೆಲ್ಲಾ ಅವಾಂತರಗಳಿಗೆ ಪುರೋಹಿತಶಾಯಿ ಚಿಂತಾನಾ ಕ್ರಮಗಳೇ ಕಾರಣ. ಬುದ್ದರ ಬಸವ ಅಂಬೇಡ್ಕರ್ ಕುವೆಂಪು ಕಾರಂತರ ವಿಚಾರಗಳೇ ಪರಿಹಾರ,
ಯಾವಕಾಲದ ಶಾಸ್ತ್ರ ಏನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನೋ?
ಎಂದೋ ಮನು ಬರೆದುದು ಇಂದೆಮಗೆ ಕಟ್ಟೇನು?
ನಿನ್ನೆದೆಯೆ ಋಷಿ ನಿನಗೆ ನೀನು.