ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಗೆ ವಂಚನೆ

Friday, November 20th, 2020
Jyotishi

ಪುತ್ತೂರು :  ನಕಲಿ ಜ್ಯೋತಿಷಿಯೊಬ್ಬ ಜನರಿಂದ ಹಣ  ಪಡೆದು ವಂಚಿಸಿದ  ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಂಡ್ಯದ  ವ್ಯಕ್ತಿ  ಜ್ಯೋತಿಷಿಯಂತೆ ನಟಿಸಿದನ್ನು ಹಲವಾರು  ಮಂದಿ ನಂಬಿದ್ದರು.  ಹಣ ಕೊಟ್ಟ ಬಳಿಕ ಅವರಿಗೆ ಮೋಸದ ಅರಿವಾಗಿದೆ ಎಂದು ಹೇಳಲಾಗಿದೆ. ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಜ್ಯೋತಿಷಿ ಹಲವಾರು ಜನರಿಂದ ಹಣ ತೆಗೆದುಕೊಂಡು ವಂಚನೆ ಮಾಡಿದ್ದರಿಂದ , ಅವರು ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ನಕಲಿ ಜ್ಯೋತಿಷಿ ಗೂಗಲ್‌ ಪೇ ಮೂಲಕ ಹಣವನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ. ವಿಡಿಯೋ  ವೈರಲ್ ಆಗುತ್ತಿದ್ದಂತೆ ಜ್ಯೋತಿಷಿ ಗೂಗಲ್‌ ಪೇ […]

ನಕಲಿ ಜ್ಯೋತಿಷಿಗಳ ಹಾವಳಿ ತಡೆಯಲು ಮಹಿಳೆಯರ ಮೌನ ಪ್ರತಿಭಟನೆ

Sunday, January 22nd, 2017
Fake Astrologer

ಮಂಗಳೂರು:  ಮಾಟ, ಮಂತ್ರ, ವಶೀಕರಣ ಎಂದು  ನಕಲಿ ಜ್ಯೋತಿಷಿಗಳ ಹಾವಳಿ ಮಂಗಳೂರಲ್ಲಿ  ಮಿತಿಮೀರುತ್ತಿದೆ. ಈಗಾಗಲೇ ಸಾಕಷ್ಟು ಅಮಾಯಕ ಹೆಣ್ಣುಮಕ್ಕಳು ನಕಲಿ ಜ್ಯೋತಿಷಿಗಳಿಗೆ ಬಲಿಯಾಗಿದ್ದಾರೆ. ಅಲ್ಲಲ್ಲಿ ಹೆಣ್ಣುಮಕ್ಕಳ ಲೈಂಗಿಕ ಶೋಷಣೆಗಳು ನಡೆಯುತ್ತಿವೆ. ಅಂತಹ ನಕಲಿ ಜ್ಯೋತಿಷಿಗಳ ಹಾವಳಿ ತಡೆಯುವಂತೆ ಒತ್ತಾಯಿಸಿ ಮಹಿಳೆಯರು ಮೌನ ಪ್ರತಿಭಟನೆ ನಡೆಸಿದರು. ಇಲ್ಲಿನ ವಸತಿಗೃಹಗಳಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಚೇರಿ ತೆರೆದು ಜನತೆಯ ಮೌಢ್ಯತೆಯನ್ನು ನಕಲಿ ಜ್ಯೋತಿಷಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೆವ್ವ, ಪಿಶಾಚಿ ಬಾಧೆಬಿಡಿಸುವ ನೆಪದಲ್ಲಿ ಜನತೆಯ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಆರೋಪಿಸಿ […]