ಎಂಡೋಸಲ್ಫಾನ್ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ

5:58 PM, Wednesday, December 12th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Endo Protestಮಂಗಳೂರು :ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಎಐಸಿಸಿ ಸದಸ್ಯ ಪಿವಿ ಮೋಹನ್ ನೇತೃತ್ವದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.

Endo protestಉಪವಾಸ ಸತ್ಯಾಗ್ರಹವನ್ನು ಕಾಂಗ್ರೆಸ್ ನಾಯಕ ಜೆ.ಆರ್. ಲೋಬೊ ಉದ್ಘಾಟಿಸಿ ಎಂಡೋಸಲ್ಫಾನ್ ಸಿಂಪಡನೆಯಿಂದ ಹಲವಾರು ಮಂದಿ ತೊಂದರೆಯನ್ನು ಅನುಭವಿಸುತ್ತಿದ್ದು ಇವರು ಸೂಕ್ತ ರೀತಿಯ ಪರಿಹಾರ ಸಿಗದೆ ನರಳುತ್ತಿದ್ದರೂ ಸರಕಾರ ಮಾತ್ರ ಈ ವಿಷಯದಲ್ಲಿ ತನ್ನ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಎಂಡೋ ಸಲ್ಫಾನ್ ಅಥವಾ ಇನ್ನಾವುದೇ ರಾಸಾಯನಿಕಗಳನ್ನು ಸಿಂಪಡಿಸುವ ಸಂದರ್ಭದಲ್ಲಿ ಆ ರಾಸಾಯನಿಕ ವಸ್ತುಗಳಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಯಾವುದೇ ರಾಸಾಯನಿಕ ವಸ್ತುಗಳು ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಎಂದಾದಲ್ಲಿ ಅಂತಹ ವಸ್ತುಗಳನ್ನು ನಿಷೇಧಿಸುವುದು ಸರ್ಕಾರದ ಕರ್ತವ್ಯ ಆದರೆ ಇದನ್ನು ನಿಷೇಧಿಸುವಲ್ಲಿ ಇನ್ನು ಕೂಡ ಮೀನ ಮೇಷ ಎಣಿಸುತ್ತಿದೆ. ಇದು ಸರಿಯಲ್ಲ ನಮ್ಮ ಸರಕಾರದೊಂದಿಗೆ ಸೇರಿ ನಾವು ಕೂಡ ಎಂಡೋ ಕುರಿತ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.

Endo Protestನಮ್ಮ ಪ್ರಪಂಚದಲ್ಲಿನ ಇತಿಹಾಸದಂತೆ ಹಿರೋಶಿಮ, ನಾಗಸಾಕಿ ಅಣುಬಾಂಬ್, ಭೋಪಾಲ್ ದುರಂತಗಳು ಸಹಸ್ರಾರು ಜೀವಗಳನ್ನು ಬಲಿತೆಗೆದುಕೊಂಡಿತು ಆದರೆ ಅವೆರಡರ ನಂತರದ ಸ್ಥಾನದಲ್ಲಿ ನಮ್ಮ ಈ ಎಂಡೊಸಲ್ಫಾನ್ ದುರಂತವಿದೆ. ನಾವು ಈ ದುರಂತದ ಪರಿಣಾಮಗಳನ್ನು ಸ್ಪಷ್ಟವಾಗಿ ಅರಿಯುವಲ್ಲಿ ವಿಫಲರಾದೆವು. ಈ ಸಮಸ್ಯೆಯ ಕುರಿತಂತೆ ನಾವು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸಿ ಸರಕಾರವು ಸಂತ್ರಸ್ತರಿಗೆ ಸೂಕ್ತವಾದ ಪ್ಯಾಕೇಜನ್ನು ಘೋಷಿಸಲು ಹಾಗೂ ಸಂತ್ರಸ್ತರಿಗೆ ನೆರವಾಗಲು ಸರಕಾರವನ್ನು ಒತ್ತಾಯಿಸಿ ಅದರ ಮೇಲೆ ಒತ್ತಡ ತರೋಣ ಎಂದರು.

ಉಪವಾಸ ಸತ್ಯಾಗ್ರಹದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಡೆನಿಸ್ ಡೇಸ, ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಕೆ.ಸುಧೀರ್, ಇಬ್ರಾಹಿಂ ಕೋಡಿಜಾಲ್, ಕೃಪಾ ಅಮರ್ ಆಳ್ವ, ಡಿವೈಎಫ್ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English