ಸೋಮೇಶ್ವರ ತೀರದಲ್ಲಿ ಹಸುರು ಮತ್ತು ನೀಲಿ ಬಣ್ಣಕ್ಕೆ ತಿರುಗಿದ ಸಮುದ್ರದ ಅಲೆಗಳ ಬಣ್ಣ

6:40 PM, Tuesday, November 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ullal Beachಉಳ್ಳಾಲ : ಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳ ಬಣ್ಣ ನೀಲಿಯಾಗಿ  ಗೋಚರಿಸಿದ್ದು , ಸೋಮವಾರ ತಡರಾತ್ರಿವರೆಗೂ ಕುತೂಹಲಿಗರು ಸಮುದ್ರ ತಟದಲ್ಲಿ ನಿಂತು ಅಲೆಗಳ  ಬಣ್ಣದ ಆಟವನ್ನು ವೀಕ್ಷಣೆ ನಡೆಸಿದರು.

ಅರಬ್ಬಿ ಸಮುದ್ರದ ಮಲ್ಪೆಯ ಪಡುಕೆರೆ,ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಡುತ್ತಿದ್ದಂತೆ , ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ರಾತ್ರಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡರು.

ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳಿಂದ ವಿಚಿತ್ರ ವಿದ್ಯಮಾನ ಜರಗುತ್ತಿದ್ದು, ಹಗಲು ಹೊತ್ತು ಪಾಚಿ ಬಣ್ಣದ ಹಸುರು ನೀರು, ರಾತ್ರಿ ನೀಲಿ ಬಣ್ಣ ನೀರು ಕಂಡುಬರುತ್ತಿದ್ದು ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ.

ಸಮುದ್ರದಾಳದ ಪಾಚಿಗಳು ಮೇಲೆ ಬಂದು ಈ ಬಣ್ಣಕ್ಕೆ ತಿರುಗಿರಬಹುದೆಂದು ತಜ್ಞರ ಅಭಿಪ್ರಾಯ. ರಾತ್ರಿ ಚಂದ್ರನ ಬೆಳಕಿಗೆ ಪ್ರತಿಫಲನಗೊಳ್ಳುವ ಸಂದರ್ಭ ಸಮುದ್ರ ನೀಲಿ ಬಣ್ಣದಿಂದ ಕಂಗೊಳಿಸುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English