ಮಂಗಳೂರು : ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕಿಯನ್ನು ಮದುವೆಯಾದ ಮಹಿಳೆಯ ಗಂಡನನ್ನು ಆತನ ಮನೆಯವರು ಎರಡು ವರ್ಷದ ಬಳಿಕ ಆಕೆಗೆ ಸಿಗದಂತೆ ನಿಗೂಢವಾಗಿ ಅಡಗಿಸಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೇರಳದ ಕಣ್ಣೂರು ಮೂಲದ ಶಾಂತಿ ಜೂಬಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದ ಇಬ್ರಾಹಿಂ ಖಲೀಲ್ ಕಟ್ಟೇಕರ್ ಎಂಬವರು ಫೇಸ್‌ಬುಕ್ ಮೂಲಕ ಪರಿಚಯವಾಗಿ ಜುಲೈ 12, 2017 ಮದುವೆಯಾಗುತ್ತಾರೆ. ಮದುವೆಯಾದ ಬಳಿಕ ಶಾಂತಿ ಜೂಬಿ ಆಯಿಷಾ ಇಬ್ರಾಹಿಂ ಖಲೀಲ್ ಕಟ್ಟೇಕರ್ ಎಂದು ಹೆಸರು ಬದಲಿಸಿಕೊಂಡು ದಂಪತಿಗಳು ಬೆಂಗಳೂರು, ಮೈಸೂರು ಮುಂತಾದ ವಿವಿಧ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.
ಮದುವೆಯಾದ ವಿಷಯ ತಿಳಿದ ಸಹೋದರರು ಇಬ್ರಾಹಿಂ ಖಲೀಲ್ ಕಟ್ಟೇಕರ್ ಅವರನ್ನು ಸುಳ್ಯ ದಲ್ಲಿರುವ ತಮ್ಮ ಮನೆಗೆ ಕರೆದೊಯ್ದರು, ಆಯಿಷಾರನ್ನು ಬೆಂಗಳೂರಿನಲ್ಲಿ ಉಳಿಯುವಂತೆ ಕೇಳಿಕೊಂಡರು.
ಇಬ್ರಾಹಿಂ ಖಲೀಲ್ ಕಟ್ಟೇಕರ್ ಹಿರಿಯ ಸಹೋದರ ಶಿಹಾಬ್ ಮತ್ತು ಇತರರು ನನ್ನ ಗಂಡನನ್ನು ಮತ್ತೆ ನನ್ನೊಂದಿಗೆ ಕಳುಹಿಸಲಿಲ್ಲ ಎಂದು ದೂರಿದ್ದಾರೆ.
ಆಯಿಷಾ ತನ್ನ ಗಂಡನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಕುಟುಂಬ ಸದಸ್ಯರು ನನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಪುತ್ತೂರು ಮತ್ತು ಸುಳ್ಯ ಪೊಲೀಸ್ ಠಾಣೆಗಳಲ್ಲಿ ಎರಡೂ ಕಡೆಯವರು ಭೇಟಿಯಾಗಿ ಚರ್ಚೆ ನಡೆಸಿದರು ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. ಪತಿಯನ್ನು ಎಲ್ಲೋ ಮರೆಮಾಡಲಾಗಿದೆ ಮತ್ತು ಅವರ ಮೊಬೈಲ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಆಯಿಷಾ ಹೇಳುತ್ತಾರೆ.
ಗಂಡನ ಬೇಡಿಕೆಯಂತೆ ಎರಡು ಐಷಾರಾಮಿ ಕಾರುಗಳು ಮತ್ತು ಎರಡು ಸ್ಕೂಟರ್‌ಗಳ ಜೊತೆಗೆ 25 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ನೀಡಲಾಗಿದೆ ಎಂದು ಆಯಿಷಾ ಹೇಳುತ್ತಾರೆ. ಇಷ್ಟು ಕೊಟ್ಟರು, ಗಂಡನ ಮನೆಯವರು ಸಂತೋಷವಾಗಿಲ್ಲ ಮತ್ತು ಮಾನಸಿಕ ಚಿತ್ರಹಿಂಸೆ ನೀಡುತ್ತಲೇ ಇದ್ದಾರೆ ಎಂದು ಆಯಿಷಾ ಹೇಳುತ್ತಾರೆ ಮತ್ತು ತನ್ನನ್ನು ತನ್ನ ಗಂಡನಿಂದ ದೂರವಿರಿಸಲಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ.
ಆದುನಿಕ್ ಮಾನವ ಹಕ್ಕುಗಳ ಸಮಿತಿ ರಾಜ್ಯ ಅಧ್ಯಕ್ಷ ರಾಜೇಶ್ ಕೊಯೆಲ್ಹೋ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಬ್ಬೀರ್ ಉಲ್ಲಾಲ್ ನೇತೃತ್ವದಲ್ಲಿ, ಪತಿ ಇಬ್ರಾಹಿಂ ಖಲೀಲ್ ಕಟ್ಟೇಕರ್ ಅವರೊಂದಿಗೆ ಜೀವನವನ್ನು ನಡೆಸಲು ಸಹಾಯ ಮಾಡಲು ಆಯಿಷಾ ಈಗ ಮಾಧ್ಯಮಗಳ ಮೊರೆ ಹೋಗಿದ್ದಾರೆ.
Click this button or press Ctrl+G to toggle between Kannada and English