ಮಂಗಳೂರು : ಸಿಪಿಎಂ ಪಕ್ಷದ ಹಿರಿಯ ಮುಂದಾಳು, ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಂಚಿನ ಕಂಠದ ಮಾತುಗಾರ, ವಿಮರ್ಶಕರು, ಚಿಂತಕರಾಗಿರುವ ಮೋರ್ಲ ವೆಂಕಪ್ಪ ಶೆಟ್ಟಿ (87) ಶನಿವಾರ ಬೆಳಗ್ಗೆ ನಿಧನರಾದರು.
ಸಿಪಿಎಂ ಪಕ್ಷದಲ್ಲಿ 1965 ರಲ್ಲಿ ರೈತರ ಬೇಡಿಕೆ ಈಡೇರಿಸಲು ಮಂಗಳೂರಿನಿಂದ ಬೆಂಗಳೂರು ತನಕ ಕಾಲ್ನಡಿಗೆ ಜಾಥಾ ನಡೆಸಿದ್ದರು. ಬೀಡಿ ಕಾರ್ಮಿಕರ, ರೈತರ ಪರ ಹೋರಾಟ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು.
ವರ್ಕಾಡಿ ಗಡಿಪ್ರಧಾನ ಮನೆಯವರಾಗಿದ್ದ ವೆಂಕಪ್ಪ ಶೆಟ್ಟಿ ಜ್ಞಾನ ಭಂಡಾರ ಅತಿ ದೊಡ್ಡದು, ಸರಸ್ವತಿ ನಾಲಗೆಯ ತುದಿಯಲ್ಲೇ ಹರಿದಾಡುತ್ತಿದ್ದು ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವಿತ್ತು. ಯಕ್ಷಗಾನ ತಾಳಮದ್ದಲೆ ಯಲ್ಲಿ ತನ್ನ ಕಂಚಿನ ಕಂಠದ ಧ್ವನಿಯಲ್ಲಿ ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದ್ದರು.
ನರಿಂಗಾನ ಗ್ರಾಮದ ಬೆರ್ಮದೆಯಲ್ಲಿ ಸುದರ್ಶನ ಯುವಕ ಮಂಡಲ, ತೌಡುಗೋಳಿಯಲ್ಲಿ ನರಿಂಗಾನ ಯುವಕಮಂಡಲ ಸ್ಥಾಪನೆ ಮಾಡುವಲ್ಲಿ, ನರಿಂಗಾನ ಪ್ರಾಥಮಿಕ ಶಾಲೆ ಸ್ಥಾಪನೆ ಮಾಡಲು ಸಾಕಷ್ಟು ಶ್ರಮ ವಹಿಸಿದ್ದರು
ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಮುಂಬೈ ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
Click this button or press Ctrl+G to toggle between Kannada and English