ದನ ಮೇಯಿಸಲು ತೆರಳಿದ್ದ ಬಾಲಕನನ್ನು ತಿಂದು ಹಾಕಿದ ಮೊಸಳೆ

6:16 PM, Thursday, December 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Raichur crocodail attackರಾಯಚೂರು: ದನ ಮೇಯಿಸಲು ತೆರಳಿದ್ದ ಬಾಲಕ ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದಾಗ  ಮೊಸಳೆ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾದ ಬಾಲಕ. ಬುಧವಾರದಂದು ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ಕೃಷ್ಣ ನದಿ ದಂಡೆಯತ್ತ ಹೋಗಿದ್ದ.

ಊಟ ಮಾಡಿದ ಬಳಿಕ ಬಾಯಾರಿಕೆಯಾದ ಹಿನ್ನೆಲೆ ಕೃಷ್ಣಾ ನದಿಯಲ್ಲಿ ನೀರು‌ ಕುಡಿಯಲು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಾನೆ. ಈ ವೇಳೆ ಬಾಲಕನನ್ನು ಎಳೆದೊಯ್ದ ಮೊಸಳೆ ದೇಹವನ್ನ ಸಂಪೂರ್ಣವಾಗಿ ತಿಂದು ತಲೆ ಬುರುಡೆ ಮಾತ್ರ ಬಾಕಿ ಬಿಟ್ಟಿದೆ. ನಿನ್ನೆ ರಾತ್ರಿ ಬಾಲಕನ ತಲೆ ಬುರುಡೆ ಪತ್ತೆಯಾಗಿದೆ. ಸದ್ಯ ಇಡೀ ಡೊಂಗಾರಾಂಪುರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಹಲವು ಘಟನೆಗಳು ಕೃಷ್ಣಾ ನದಿಯಲ್ಲಿ ನಡೆದಿದೆ.

ಮಧ್ಯಾಹ್ನದ ವೇಳೆ ಗೆಳೆಯರು ಎಲ್ಲ ಗೆಳೆಯರು ಸೇರಿಕೊಂಡು ಊಟ ಮಾಡಿದ್ದಾರೆ. ಈ ವೇಳೆ ಬಕ ಪಕ್ಷಿಯಂತೆ ಕಾದು ಕುಳಿತ್ತಿದ್ದ ಮೊಸಳೆ ಅವನ ಮೇಲೆ ದಾಳಿ ನಡೆಸಿದೆ. ಇದನ್ನು ನೋಡುತ್ತಿದ್ದ ಮಲ್ಲಿಕಾರ್ಜುನನ ಸ್ನೇಹಿತರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English