ಉಡುಪಿ ಶ್ರೀಕೃಷ್ಣ ಮಠದ ಮುಖ್ಯದ್ವಾರದಲ್ಲಿ ಕನ್ನಡ ನಾವು ಫಲಕ ಪ್ರತ್ಯಕ್ಷ

8:17 PM, Thursday, December 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Krishna Matt ಉಡುಪಿ :  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪಣೆಯ ಬಳಿಕ ಉಡುಪಿ ಶ್ರೀಕೃಷ್ಣ ಮಠದ ಮುಖದ್ವಾರದ ಗುರುವಾರ ಮಠದ ಎದುರು ಕನ್ನಡ ನಾವು ಫಲಕವನ್ನು ಮತ್ತೆ ಆಳವಡಿಸಲಾಗಿದೆ.

ಈ ಹಿಂದೆ ಮುಖದ್ವಾರದಲ್ಲಿದ್ದ ಶ್ರೀಕೃಷ್ಣ ಮಠ ಎಂಬುದಾಗಿ ಬರೆಯಲಾದ ಕನ್ನಡ ನಾಮ ಫಲಕವನ್ನು ತೆಗೆದು, ‘ಶ್ರೀಕೃಷ್ಣ ಮಠ ರಜತಪೀಠ ಪುರ’ ಎಂದು ತುಳು ಹಾಗೂ ಸಂಸ್ಕೃತ ಭಾಷೆಯ ನಾಮಫಲಕವನ್ನು ಮಾತ್ರ ಹಾಕಲಾಗಿತ್ತು. ಇದಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಸಾಕಷ್ಟು ಪರ ಹಾಗೂ ವಿರೊೀಧ ಚರ್ಚೆಗಳು ಕೂಡ ನಡೆದಿತ್ತು.
ಇದೀಗ ಮಠದ ಎದುರಿನ ಮಂಟಪಕ್ಕೆ ‘ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲ ಸಂಸ್ಥಾನ, ಶ್ರೀಕೃಷ್ಣ ಮಠ, ಉಡುಪಿ’ ಎಂದು ಮರದಲ್ಲಿ ಬರೆದ ನಾಮ ಫಲಕವನ್ನು ಹಾಕಲಾಗಿದೆ. ಈ ಮೂಲಕ ವಿವಾದಕ್ಕೆ ತೆರೆ ಎರೆಯಲಾಗಿದೆ.

ತುಳುನಾಡಿನ ಜನ ಕನ್ನಡವನ್ನು ಉಳಿಸುವ ಕೆಲಸವನ್ನು ಸ್ವಯಂಪ್ರೇರಣೆ ಯಿಂದ ಮಾಡುತ್ತಿದ್ದಾರೆ. ದಾಸ ಪರಂಪರೆ ಕೂಡ ಇದಕ್ಕೆ ಮಹತ್ವ ಕೊಡುಗೆ ನೀಡಿದೆ. ರಾಜಾಂಗಣದಲ್ಲಿ ನಡೆಯುವ ಶೇ.99ರಷ್ಟು ಕಾರ್ಯಕ್ರಮ ಕನ್ನಡ ದಲ್ಲೇ ನಡೆಯುತ್ತಿದೆ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಇಂದು ರಥಬೀದಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ನಾಮಫಲಕ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English