ಮಂಗಳೂರು : ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದಿಂದ ಮಂಗಳೂರಿಗೆ ದೊಡ್ಡದಾದ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಗರದ ಹೊರವಲಯದ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ಅಪಘಾತಕ್ಕೀಡಾಗಿ ಚಾಲಕನು ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.
ಲಾರಿಯ ಮುಂದೆ ಚಲಿಸುತ್ತಿದ್ದ ಕಾರೊಂದು ಅನಿರೀಕ್ಷಿತವಾಗಿ ತಿರುಗಿದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನು ಬ್ರೇಕ್ ಹಾಕಿದ ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿಯು ಮುಂದಿನ ಲಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಕೊಳವೆಗಳು ಮುಂದಕ್ಕೆ ಜಾರಿ ಚಾಲಕನು ಕುಳಿತುಕೊಳ್ಳುವ ಜಾಗದ ಮೇಲ್ಬಾಗಕ್ಕೆ ಗುದ್ದಿದ್ದು ಕಂಪಾರ್ಟ್ ಮೆಂಟ್ ಪೂರ್ತಿಯಾಗಿ ನಜ್ಜುಗುಜ್ಜಾಗಿದೆ. ಆದರೆ ಲಾರಿಯ ಚಾಲಕನಾಗಿದ ಪಂಜಾಬ್ ಮೂಲದ ಜಸ್ವಿಂದರ್ ಸಿಂಗ್ ಸಣ್ಣ ಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾನೆ. ಕೆಲ ತಿಂಗಳುಗಳ ಹಿಂದೆ ಕಾಪು ಬಳಿ ಇಂತಹದ್ದೇ ಘಟನೆ ನಡೆದು ಒಬ್ಬ ಮೃತಪಟ್ಟಿದ್ದ.
Click this button or press Ctrl+G to toggle between Kannada and English