ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸುಹೈಬ್ ಅಲಿ

11:52 AM, Wednesday, December 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

SUHAIB-ALIವಿಟ್ಲ : ದುಬೈನಲ್ಲಿ ನಡೆದ 24ಗಂಟೆಗಳ ಕಾಂಟ್ರೋಮೆಂಟ್ 2020,ಕಾರ್ ರೇಸಲ್ಲಿ ಮೂಡಬಿದಿರೆಯ ಸುಹೈಬ್ ಅಲಿ ಟೀಮ್ ಮತ್ತೆ ಪ್ರಶಸ್ತಿಗಳನ್ನು ಪಡೆದು ಭಾರತದ ಗೌರವ ಹೆಚ್ಚಿಸಿದೆ.

ದುಬೈನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್೨೦೨೦ ಕಾರ್ ರೇಸಿಗೆ ಆಯ್ಕೆಯಾಗಿದ್ದ ೭೨ದೇಶಗಳ ಪೈಕಿ ೪೨ದೇಶಗಳು ಭಾಗವಹಿಸಿವೆ. ೪೨ತಂಡವನ್ನೂ ಹಿಂದಿಕ್ಕಿದ ಮೂಡಬಿದಿರೆಯ ಸುಹೈಬ್ ಅಲಿ ಟೀಮ್ ಎರಡು ಪ್ರಶಸ್ತಿಗಳನ್ನು ಪಡೆದು ಮತ್ತೆ ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ನಮ್ಮ ದೇಶದ ಕಂಪನಿಗಳು ಮತ್ತು ದಾನಿಗಳು ನಮಗೆ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಮುಂದೆ ನಡೆಯಲಿರುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತಷ್ಟು ಪ್ರಶಸ್ತಿಗಳನ್ನು ಪಡೆದು ಭಾರತದ ಕೀರ್ತಿ ಪತಾಕೆ ಹಾರಿಸುತ್ತೇವೆಂದು ಸುಹೈಬ್ ಅಲಿ ಭರವಸೆ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English