ಕೊಣಾಜೆ : ಕೊಣಾಜೆ ನಿವಾಸಿ ಛಾಯಾಗ್ರಾಹಕ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದ ಧರಣೇಶ್ ಅವರು ದೇರಳಕಟ್ಟೆಯಲ್ಲಿ ಫೋಟೋಸ್ಪಾಟ್ ಎಂಬ ಸ್ಟುಡಿಯೋ ಹೊಂದಿದ್ದರು.
ಹೃದಯ ಸಂಬಂಧಿ ತೊಂದರೆಯ ಹಿನ್ನೆಲೆ ಕಾರಣ ಧರಣೇಶ್ ಅವರನ್ನು ಕೆಲವು ದಿನಗಳವರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ.
ಗಂಜಿಮಠದಲ್ಲಿನ ಎಸ್ಟಿಡಿ ಬೂತ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಧರಣೇಶ್ ಪಕ್ಕದಲ್ಲಿ ಸ್ಟುಡಿಯೋ ದಲ್ಲಿ ಛಾಯಾಗ್ರಹಣ ಕಲಿತರು. ಸಂಬಂಧಿಯೋರ್ವರು ಸಹಕಾರದಿಂದ ದೇರಳಕಟ್ಟೆಯಲ್ಲಿ ಸ್ಟುಡಿಯೋವನ್ನು ತೆರೆದಿದ್ದರು. ಧರಣೇಶ್ ಉತ್ತಮ ಛಾಯಾಗ್ರಹಣ ಮಾಡುತ್ತಿದ್ದರಲ್ಲದೆ ವಿವಿಧ ಮಾಡೆಲ್ ಗಳ ಕ್ಯಾಮೆರಾಗಳ ಪರಿಣತಿ ಹೊಂದಿದ್ದರು.
ಧರಣೇಶ್ ಅವರು ಕೊಣಾಜೆಯ ಬೊಳ್ಳೆಕುಮೇರ್ ನಿವಾಸಿಯಾಗಿದ್ದು, ಲಕ್ಷ್ಮಣ ಹಾಗೂ ಸತ್ಯವತಿ ಅವರ ಪುತ್ರ. ಮೃತರು ತಂದೆ, ತಾಯಿ ಇಬ್ಬರು ಸಹೋದರಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ಧರಣೇಶ್ ಅವರು ಉಳ್ಳಾಲ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಇವರ ತಾಯಿ ಸತ್ಯವತಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ.
Click this button or press Ctrl+G to toggle between Kannada and English