ಪಂಚಾಯತ್ ಚುನಾವಣೆ ವೇಳೆ ವಿಟ್ಲ ಪರಿಸರದಲ್ಲಿ ಅಲ್ಲಲ್ಲಿ ವಾಮಾಚಾರ

5:43 PM, Thursday, December 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

BlackMagicವಿಟ್ಲ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿಯಲ್ಲಿ ವಾಮಾಚಾರ ಮಾಡಿರುವುದು ಪತ್ತೆಯಾಗಿದ್ದು ಬಿಜೆಪಿ ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ ದೈವದ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೋ ಲಿಪಿಯಲ್ಲಿ ಬರೆಯಲಾಗಿದೆ.  ಇದನ್ನು ಬಿಜೆಪಿ ಅಭ್ಯರ್ಥಿಯ ಎದುರಾಳಿ ನಡೆಸಿರಬಹುದಾದ ಶಂಕೆ ವ್ಯಕ್ತವಾಗಿದೆ.

ಬಿಜೆಪಿ ಅಭ್ಯರ್ಥಿಯ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ. ಬಂಡಮುಗೇರು ಕ್ರಾಸ್ ನಲ್ಲಿಯೂ ಒಂದು ಯಾವುದೇ ಲಿಪಿ ಇರದ ಮಾಮೂಲಿ ತೆಂಗಿನಕಾಯಿ ಹಾಗೂ ಲಿಂಬೆ ಹುಳಿ ಒಡೆದಿರುವುದು ಕಂಡು ಬಂದಿದೆ. ಇದನ್ನು ಬಿಜೆಪಿ ಪ್ರಮುಖರು ಗಮನಿಸಿದ್ದು, ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ ದೈವದ ಮೊರೆ ಹೋಗಿ ದೈವದ ಚಾಕ್ರಿ ಮಾಡುತ್ತಿರುವ ಹಿರಿಯರಾದ ದೇವು ಸಪಲ್ಯ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ನಂತರ ಚುನಾವಣೆ ದಿವಸ ಸಂಜೆ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯ ಹತ್ತಿರ ಮತ್ತೊಂದು ತೆಂಗಿನಕಾಯಿ ಒಡೆದಿದ್ದು ಪತ್ತೆಯಾಗಿದೆ. ಇದೀಗ ಈ ಭಾಗದಲ್ಲಿ ಆತಂಕ ವ್ಯಕ್ತವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English