ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 14 ಗುರುವಾರ ಸಂಜೆ ಧ್ವಜಾರೋಹಣದೊಂದಿಗೆ ಆರಂಭವಾಗಿದ್ದು, ಜನವರಿ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.
ದೇವಳದ ಕೆರೆಗಳಲ್ಲಿ ಗುರುವಾರ ಬೆಳಗ್ಗೆ 5ಗಂಟೆಯಿಂದ ತೀರ್ಥಸ್ನಾನ ನಡೆದಿದ್ದು, ಸಹಸ್ರಾರು ಭಕ್ತಾರು ಭಾಗವಹಿಸಿದ್ದರು.
ಸಂಜೆ 6.30ರ ವೇಳೆಗೆ ಏಳುಪಟ್ಟಣ ಮೊಗವೀರ ಮಹಾಸಭಾದವರಿಂದ ಧ್ವಜಸ್ತಂಭ ಆರೋಹಣ ನೆರವೇರಿದ್ದು, ಮಹಾಪೂಜೆ ನಡೆಯಿತು. ಬಳಿಕ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ ಬೆಳಗಿಸಲಾಯಿತು. ಬಳಿಕ ಸಣ್ಣ ರಥೋತ್ಸವ ನೆರವೇರಿತು.
ಜನವರಿ 21ರಂದು ಮಧ್ಯಾಹ್ನ ರಥಾರೋಹಣ ಗೊಂಡು ಸಂಜೆ 6ಕ್ಕೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ ನೆರವೇರಲಿದೆ.
Click this button or press Ctrl+G to toggle between Kannada and English