ದ್ವೆವ ದೇವಸ್ಥಾನ ಶ್ರದ್ದಾ ಕೇಂದ್ರಗಳಿಗೆ ಅಪಚಾರ ಎಸಗಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ : ಯೋಗೀಶ್ ಶೆಟ್ಟಿ ಜಪ್ಪು

8:50 PM, Friday, January 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

TRV ಮಂಗಳೂರು  : ಇತ್ತೀಚೆಗೆ ಉಲ್ಲಾಳ, ಕೋಣಾಜೆ,ಬಾಬುಗುಡ್ಡೆ, ದೇವಸ್ಥಾನವೊಂದರ ಕಾಣಿಕೆ ಹುಂಡಿಯಲ್ಲಿ ಕಾಂಡಮ್ ಮತ್ತಿತರ ವಸ್ತುಗಳನ್ನು ಹಾಕಿ ವಿಕೃತಿ ಮೆರೆದಂತಹ ದುಷ್ಕರ್ಮಿ ಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಟ್ಡುನಿಟ್ಟಿನ ಕಾನೂನು ಕ್ರಮ ಕೈಗೊಳ್ಳ  ಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ.

ತುಳುನಾಡಲ್ಲಿ ಬೇರೆ ಬೇರೆ ಜಾತಿ ಜನಾಂಗದ ಜನರು ಬಹಳ ಸೌಹಾರ್ದಯುತವಾಗಿ ಸಾವಿರಾರು ವರ್ಷಗಳಿಂದೀಚೆಗೆ ಬದುಕಿ ಬಾಳುತ್ತಿದ್ದು ಇಂತಹ‌ ಶಾಂತಿಯ ವಾತಾವರಣವನ್ನು ಕಲುಷಿತ ಗೊಳಿಸಿ ಗಲಭೆ ಸೃಷ್ಟಿಸಿ‌ ಆ ಮೂಲಕ ರಾಜಕೀಯ ಲಾಭ ಕೊಯ್ಯಲು ಹೂಡಿದ ಹುನ್ನಾರ ಇದಾಗಿರಬಹುದು ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.

ಯಾವುದೇ ಧರ್ಮದ ದೇವಸ್ಥಾನಗಳು ಅಥವಾ ಕಾಣಿಕೆ ಹುಂಡಿಗಳು ಇರಬಹುದು ಅವುಗಳನ್ನು ಅವಹೇಳನ ಮಾಡಿ ವಿಕೃತಿ ಮರೆಯುವುದು ಘನಘೋರ ಅಪರಾಧವಾಗಿದೆ.

ಈ ಹಿಂದೆ ಮತ್ತೊಂದು ಕಡೆ ಇಂತಹದೇ ಕೃತ್ಯ ನಡೆದಿದ್ದು ಪುನಃ ಬೇರೆ ಬೇರೆ ಕಡೆ ಗಳಲ್ಲಿ ಮರುಕಳಿಸುತ್ತಿರುದು ಖಂಡನೀಯ. ಕಿಡಿಗೇಡಿಗಳನ್ನು ಕೂಡಲೇ ಬಲೆ ಬೀಸಿ ಬಂದಿಸಿ ಈಗ ಇಂತಹ ನೀಚ ಕೃತ್ಯ ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.

ಕಿಡಿಗೇಡಿಗಳ ಮದ್ಯೆ ಜಾತಿ ಧರ್ಮದ ಆಧಾರದಲ್ಲಿ ನೋಡದೆ. ಯಾವುದೇ ರೀತಿಯ ಶಾಂತಿಭಂಗಕ್ಕೆ ಕಾರಣರಾಗುವ ಸಮಾಜ ವಿರೋದಿ ಗಳು ಯಾವುದೇ ಜಾತಿ, ಧರ್ಮ, ಪಂಗಡ ತಾರತಮ್ಯ ನೋಡದೆ ನಿರ್ದಾಕ್ಷಿಣ್ಯವಾಗಿ ಕಂಬಿ ಎಣಿಸುವಂತೆ ಮಾಡಿದರೆ ಅದು ನಾಡಿನ ಸೌಹಾರ್ದತೆಗೆ ಒಳ್ಳೆಯದು. ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೇತೃತ್ವದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಶಶಿ ಕುಮಾರ್ ರವರಿಗೆ ಮನವಿ ನೀಡಿ ಕ್ರಮ ಜರುಗಿಸಲು ಒತ್ತಾಯಿಸಲಾಯಿತು. ನಿಯೋಗದಲ್ಲಿ ಮಂಗಳೂರು ನಗರ ಅಧ್ಯಕ್ಷ ರಮೇಶ್ ಪೂಜಾರಿ ಶೀರೂರು, ಮುಖಂಡರುಗಳಾದ ಜೆ. ಇಬ್ರಾಹಿಂ, ಜ್ಯೋತಿ ಜೈನ್, ಜೋಸೆಫ್ ಲೋಬೊ, ಮುನೀರ್ ಮುಕ್ಕಚೇರಿ, ಫಾರೂಕ್ ಗೋಲ್ಡನ್, ಹರೀಶ್ ಶೆಟ್ಟಿ ಶಕ್ತಿನಗರ, ವರ್ಷೀತ ಸಂದೀಪ್, ಶಿವಪ್ರಸಾದ್ ಕೆ. ರಕ್ಷತ್ ಕುಡುಪು, ಇರ್ಫಾನ್, ಗ್ಯಟನ್ ರೋಡ್ರಿಗಸ್, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English