ಕಾರ್ಕಳ : ಮುದ್ರಾಡಿಯ ಸಾಮಾಜಿಕ ಸೇವಾ ಸಂಘಟನೆಯಾದ ಮದಗ ಫ್ರೆಂಡ್ಸ್ ಮುದ್ರಾಡಿ ವತಿಯಿಂದ ತುಳು ಲಿಪಿಯಲ್ಲಿ ಊರಿನ ಹೆಸರಿನ ನಾಮಫಲಕವನ್ನು ಮುದ್ರಾಡಿಯ ಮದಗ ಎಂಬಲ್ಲಿ ಅನಾವರಣಗೊಳಿಸಿಲಾಯಿತು.
ತುಳುಲಿಪಿ ನಾಮಫಲಕವನ್ನು ಉದ್ಘಾಟಿಸಿದ ತುಲು ರಂಗಭೂಮಿ ಕಲಾವಿದರು ಮತ್ತು ತುಳುನಾಡ ಬಂಗಾರ್ ಗರೋಡಿಲು ಸಾಕ್ಷಚಿತ್ರದ ನಿರ್ದೇಶಕರಾದ ಶ್ರೀ ಸುರೇಂದ್ರ ಮೋಹನ್ ಮಾತನಾಡಿ ಇವತ್ತು ಇಡೀ ಮುದ್ರಾಡಿ ಗ್ರಾಮಕ್ಕೆ ಖುಷಿಯ ವಿಚಾರ. ಅದರಲ್ಲೂ ಮುದ್ರಾಡಿಯಲ್ಲಿ ತುಳುಲಿಪಿ ನಾಮಫಲಕ ಉದ್ಘಾಟನೆ ಮಾಡುವ ಸಂಧರ್ಭ ಬಂದಿದ್ದು ಹೆಮ್ಮೆಎನಿಸುತ್ತದೆ. ತುಳುಲಿಪಿ ಉಳಿಸಿ ಬೆಳೆಸುವ ಮದಗ ಫ್ರೆಂಡ್ಸ್ ಸಂಘಟನೆಯ ಕಾರ್ಯ ಇನ್ನಷ್ಟು ಪ್ರಜ್ವಲಿಸಲಿ. ಇನ್ನು ಹಲವಾರು ಸಂಘಟನೆಗಳು ತುಳುಲಿಪಿಯನ್ನು ಬೆಳೆಸುವಂತಾಗಲಿ ಎಂದು ಮದಗ ಫ್ರೆಂಡ್ಸ್ ಸಂಘಟನೆ ನಡೆಸುತ್ತಿರುವ ಸಮಾಜಸೇವೆ ಮತ್ತು ತುಳುಪರ ಸೇವೆಯನ್ನು ಶ್ಲಾಘಸಿದರು.
ತುಳು ಭಾಷೆಯಾ ಉಳಿವಿಗಾಗಿ ಇಂತಹ ನಾಮಫಲಕ ಎಲ್ಲೆಡೆ ಮೂಡುವಂತಾಗಬೇಕು, ಪ್ರತಿಯೊಬ್ಬರೂ ತುಳು ಭಾಷೆಯ ಉಳಿವಿನ ಜೊತೆಗೆ ಸಮಾಜದ ರಕ್ಷಣೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮದಗ ಫೆಂಡ್ಸ್ ಮುದ್ರಾಡಿ ಸಂಘಟನೆಯ ಅಧ್ಯಕ್ಷರಾದ ಸುಧೀರ್ ಶೆಟ್ಟಿಗಾರ್ ರವರು
ತುಳು ಸಂಸ್ಕೃತಿಯ ರಕ್ಷಣೆಗಾಗಿ ತುಳು ಲಿಪಿಯಾ ಪ್ರಚಾರದ ಉದ್ದೇಶಕ್ಕೆ ಈ ನಾಮಫಲಕವನ್ನು ನಿರ್ಮಿಸಿಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಹೆಬ್ರಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮಂಜುನಾಥ ಪೂಜಾರಿಯವರು ಮೊದಲಿನಿಂದಲೂ ಸ್ವಚ್ಛತಾ ಕಾರ್ಯಕ್ರಮ, ಶ್ರಮದಾನದಂತಹ ಸಮಾಜಸೇವೆಯನ್ನು ಮಾಡಿಕೊಂಡು ಬರುತ್ತಿರುವ ಸಂಘಟನೆ ಇವತ್ತು ಸಂಘಟನೆ ಇವತ್ತು ತುಳುಲಿಪಿಯ ನಾಮಫಲಕ ಅಳವಡಿಸುವ ಮೂಲಕ ತುಳುಭಾಷೆಗೆ ಕೊಡುಗೆಯನ್ನು ನೀಡಿದ್ದಾರೆ. ಇವರ ಎಲ್ಲಾ ಸಾಮಾಜಿಕ ಕಾರ್ಯಕ್ಕೆ ತನ್ನ ಸಂಪೂರ್ಣ ಬೆಂಬಲ ಇದ್ದು, ಪಂಚಾಯತ್ ನಿಂದ ಕೂಡ ಸಹಕಾರ ಸಿಗುವಂತಾಗಲಿ ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯನಾಗರೀಕರ ವೇದಿಕೆ ಕಾರ್ಯದರ್ಶಿ ಮತ್ತು ಗ್ರಾಮಪಂಚಾಯತ್ ಸದಸ್ಯರಾದ ಗಣಪತಿ ಎಮ್, ಗ್ರಾಮಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ರಮ್ಯಾಕಾಂತಿ, ಮದಗ ಫ್ರೆಂಡ್ಸ್ ಗೌರವ ಸಲಹೆಗಾರರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಸನತ್ ಕುಮಾರ್ ಮತ್ತು ಶುಭದರ ಶೆಟ್ಟಿ, ಹೆಬ್ರಿ ಜೇಸಿಐ ಪೂರ್ವಧ್ಯಕ್ಷರಾದ ಪ್ರಶಾಂತ್ ಪೈ ಉಪಸ್ಥಿತರಿದ್ದರು.
ಜೈ ತುಳುನಾಡ್ (ರಿ) ಸಂಘಟನೆ ಮತ್ತು ಮದಗ ಫ್ರೆಂಡ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಸದಾಶಿವ ಮುದ್ರಾಡಿ ಕಾರ್ಯಕ್ರಮದ ಮುಂದಾಳತ್ವ ವಹಿಸಿ, ಜೊತೆ ಕಾರ್ಯದರ್ಶಿ ಹರಿಪ್ರಸಾದ್ ಬಲ್ಲಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷರಾದ ಧೀರಾಜ್ M ಶೆಟ್ಟಿಯವರು ಗಣ್ಯರನ್ನು ಸ್ವಾಗತಿಸಿ, ಅಧ್ಯಕ್ಷರಾದ ಸುಧೀರ್ ಶೆಟ್ಟಿಗಾರ್ ವಂದಿಸಿದರು.
Click this button or press Ctrl+G to toggle between Kannada and English