ಬೀದಿ ಬದಿಯಲ್ಲಿ ತಿಂಡಿ ತಿನಿಸು ನೀಡಿ ಜನರ ಆರೋಗ್ಯ ಕೆಡಿಸುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತುರವೇ ಮನವಿ

10:28 PM, Tuesday, February 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

TRV ಮಂಗಳೂರು : ನಗರದ ಬೀದಿ ಬದಿ ಯಲ್ಲಿ ಅನಧಿಕೃತ ವ್ಯಾಪಾರ ಮಾಡುವರ ಮೇಲೆ ಕ್ರಮ ಜರುಗಿಸಬೇಕೆಂದು ತುರವೇ ಹೋಟೆಲ್ ಮಾಲೀಕರ ಘಟಕ ಆಗ್ರಹಿಸಿದೆ.

ಮಂಗಳೂರಿನ ಹೋಟೆಲ್ ಉದ್ಯಮಿದಾರರು ಸರ್ಕಾರದ ಪರವಾನಿಗೆ ತೆಗೆದುಕೊಂಡು ಹೋಟೆಲ್ ಉದ್ಯೋಗವನ್ನು ನಡೆಸುತ್ತಿದ್ದು G.S.T.ಕಟ್ಟಿ ಹೋಟೆಲ್ ಉದ್ಯೋಗವನ್ನು ನಡೆಸುತ್ತಿದ್ದೇವೆ.

ಆದರೆ ಬೀದಿ ಬದಿಯಲ್ಲಿ ಪರಿಶುದ್ಧ ನೀರು ಉಪಯೋಗಿಸದೆ ರೋಗ ರುಜ್ಜಿನ ಗಳಿಗೆ ಕಾರಣವಾಗುವ ತಿಂಡಿ ತಿನಿಸು ತಯಾರಿಕೆ ಮತ್ತು ಮಾರಾಟ ಮಾಡುವ ವ್ಯಾಪಾರಿಗಳು ಸರ್ಕಾರದ ಯಾವುದೇ ಆದೇಶ ಪರವಾನಿಗೆ ಇಲ್ಲದೆ ಹೋಟೆಲ್ ಉದ್ಯೋಗವನ್ನು ನಡೆಸುತ್ತಿದ್ದಾರೆ. ಆದ ಕಾರಣ ಇಂಥ ಬೀದಿ ವ್ಯಾಪಾರಿಗಳ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಹೋಟೆಲ್ ಮಾಲೀಕರ ಘಟಕ ವತಿಯಿಂದ ಮ.ನ.ಪಾ. ಆಯುಕ್ತರು, ಮೇಯರ್, ಆರೋಗ್ಯ ಸಮಿತಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ನೀಡಲಾಯಿತು.

ಹೋಟೆಲ್ ಮಾಲೀಕರ ಘಟಕ ಅಧ್ಯಕ್ಷ ಸುಧಾಕರ ಆಳ್ವ , ಉಪಾಧ್ಯಕ್ಷರಾದ ಮುನೀರ್ ಮುಕ್ಕಚೇರಿ, ಜೋಸೆಫ್ ಲೋಬೊ, ಪ್ರದಾನ ಕಾರ್ಯದರ್ಶಿ ಪಾರುಖ್ ಗೋಲ್ಡನ್,ಪೆರಿ ಡಿಸೋಜಾ, ಶಿವಪ್ರಸಾದ್, ಅಜೀಜ್ ಉಳ್ಳಾಲ, ಶೋನ್ ಡಿಸೋಜಾ, ವಿವಿಯನ್ ಡಿಸೋಜಾ, ಮತ್ತಿತರ ತುರವೇ ಪ್ರಮುಖರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English