ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ಪತ್ತೆಯಾದ ಬೃಹತ್ ಕಡಲು ಹಂದಿಯ ಕಳೇಬರ

10:42 PM, Thursday, February 4th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ullal Timingilaಮಂಗಳೂರು : ಉಳ್ಳಾಲದ ಮೊಗವೀರ ಪಟ್ಣದ ಸಮುದ್ರ ಕಿನಾರೆಯಲ್ಲಿ ಕಡು ನೀಲಿ ಬಣ್ಣದ ತಿಮಿಂಗಿಲ ಮಾದರಿಯ ಬೃಹತ್ ಕಡಲು ಹಂದಿಯ ಕಳೇಬರ ಪತ್ತೆಯಾಗಿದೆ.

ಸಮುದ್ರದಲ್ಲಿರುವ ಕಡಲು ಹಂದಿಗಳು ಸಾಧಾರಣವಾಗಿ ತಿಮಿಂಗಿಲಗಳನ್ನೇ ಹೋಲುತ್ತವೆ. ತಿಮಿಂಗಿಲದ್ದೇ ಒಂದು ಪ್ರಭೇದವಾಗಿದ್ದು ಸ್ಥಳೀಯರು ಆಡುಭಾಷೆಯಲ್ಲಿ ಕಡಲು ಹಂದಿ ಎನ್ನುತ್ತಾರೆ. ಸ್ಥಳೀಯ ಮೀನುಗಾರರ ಪ್ರಕಾರ, ಇದು ತಿಮಿಂಗಿಲ ಅಲ್ಲ. ಕಡಲು ಹಂದಿಯಂತೆ. ಸುಮಾರು ಹತ್ತು ಫೀಟ್ ಉದ್ದವಿದೆ. ಸ್ಥಳೀಯರು ತಿಮಿಂಗಿಲದ ಕಳೇಬರವನ್ನು ಕಡಲಿಗೆ ದೂಡಿರುವುದಾಗಿ ತಿಳಿದು ಬಂದಿದೆ. ಆದರೆ ಇದು ಹೆಚ್ಚು ಕೊಳೆತಿರಲಿಲ್ಲ. ಸಾಮಾನ್ಯವಾಗಿ ತಿಮಿಂಗಿಲಗಳ ದೊಡ್ಡ ಗಾತ್ರದಾಗಿದ್ದು ಅದು ಸತ್ತು ಆಳ ಸಮುದ್ರದಿಂದ ದಡಕ್ಕೆ ಬರುವಾಗ ಹಲವು ದಿನಗಳಾಗುತ್ತವೆ. ಹೀಗಾಗಿ ಕಳೇಬರ ಸಂಪೂರ್ಣ ಕೊಳೆತು ವಾಸನೆ ಬರುತ್ತದೆ.

ಇದೇ ಜಾತಿಯ ತಿಮಿಂಗಿಲಗಳು ಕಳೆದ ವರ್ಷ ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ಭಾಗಗಳಲ್ಲಿ ರಾಶಿ ರಾಶಿಯಾಗಿ ಸತ್ತು ಬಿದ್ದಿದ್ದು ಸುದ್ದಿಯಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English