ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ದಾಸರಹಳ್ಳಿ ಯುವಕನ ಮೃತದೇಹ ಪತ್ತೆ

Saturday, July 31st, 2021
Satyavelu

ಕಾಸರಗೋಡು : ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಅದು ಪಾಣೆಮಂಗಳೂರು ಸೇತುವೆಯಲ್ಲಿ ಜುಲೈ 28 ರಂದು ಮುಂಜಾನೆ ಬೈಕನ್ನು ನಿಲ್ಲಿಸಿ ನಾಪತ್ತೆಯಾಗಿದ್ದ  ಯುವಕನದೆಂದು ಗುರುತಿಸಲಾಗಿದೆ. ಮೃತರನ್ನು ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29)ಎಂದು ಗುರುತಿಸಲಾಗಿದೆ. ಕಾಸರಗೋಡು ಕರಾವಳಿ ಪೋಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದರು. ಈತನನ್ನು ಕಾಸರಗೋಡು ಪೋಲೀಸರು ಬೆಂಗಳೂರಿನಲ್ಲಿರುವ ಆತನ ಮನೆಯವರಿಗೆ ವಿಷಯ ತಿಳಿಸಿದ್ದು. ಇದೀಗ ಆತನ ಮನೆಯವರು ಕಾಸರಗೋಡಿಗೆ ಇಂದು ತಲುಪಿದ್ದು ಆತನ ಗುರುತು ಪತ್ತೆಹಚ್ಚಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ […]

ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ಪತ್ತೆಯಾದ ಬೃಹತ್ ಕಡಲು ಹಂದಿಯ ಕಳೇಬರ

Thursday, February 4th, 2021
Ullal Timingila

ಮಂಗಳೂರು : ಉಳ್ಳಾಲದ ಮೊಗವೀರ ಪಟ್ಣದ ಸಮುದ್ರ ಕಿನಾರೆಯಲ್ಲಿ ಕಡು ನೀಲಿ ಬಣ್ಣದ ತಿಮಿಂಗಿಲ ಮಾದರಿಯ ಬೃಹತ್ ಕಡಲು ಹಂದಿಯ ಕಳೇಬರ ಪತ್ತೆಯಾಗಿದೆ. ಸಮುದ್ರದಲ್ಲಿರುವ ಕಡಲು ಹಂದಿಗಳು ಸಾಧಾರಣವಾಗಿ ತಿಮಿಂಗಿಲಗಳನ್ನೇ ಹೋಲುತ್ತವೆ. ತಿಮಿಂಗಿಲದ್ದೇ ಒಂದು ಪ್ರಭೇದವಾಗಿದ್ದು ಸ್ಥಳೀಯರು ಆಡುಭಾಷೆಯಲ್ಲಿ ಕಡಲು ಹಂದಿ ಎನ್ನುತ್ತಾರೆ. ಸ್ಥಳೀಯ ಮೀನುಗಾರರ ಪ್ರಕಾರ, ಇದು ತಿಮಿಂಗಿಲ ಅಲ್ಲ. ಕಡಲು ಹಂದಿಯಂತೆ. ಸುಮಾರು ಹತ್ತು ಫೀಟ್ ಉದ್ದವಿದೆ. ಸ್ಥಳೀಯರು ತಿಮಿಂಗಿಲದ ಕಳೇಬರವನ್ನು ಕಡಲಿಗೆ ದೂಡಿರುವುದಾಗಿ ತಿಳಿದು ಬಂದಿದೆ. ಆದರೆ ಇದು ಹೆಚ್ಚು ಕೊಳೆತಿರಲಿಲ್ಲ. ಸಾಮಾನ್ಯವಾಗಿ […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮತ್ಸ್ಯ ಪ್ರದರ್ಶನಾಲಯ ಉದ್ಘಾಟನೆ

Monday, October 12th, 2020
Matsya

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತೋದ್ಯಾನದಲ್ಲಿನ ಮತ್ಸ್ಯ ಪ್ರದರ್ಶನಾಲಯದಲ್ಲಿ ಅಲಂಕಾರಿಕ ಮೀನುಗಳನ್ನು‌ ಕೊಳಕ್ಕೆ ಬಿಡುವುದರ ಮೂಲಕ  ಮತ್ಸ್ಯ ಪ್ರದರ್ಶನಾಲಯವನ್ನು  ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಉದ್ಘಾಟಿಸಿದರು. ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರಿಕೆಯಲ್ಲಿ ರಾಜ್ಯವು 1ನೇ ಸ್ಥಾನಕ್ಕೆ ಬರುವಂತೆ ಪ್ರಯತ್ನಿಸಲಾಗುವುದು. ಯಾವುದೇ ಸಾಮಾಜಿಕ ಯೋಜನೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿಯಾಗಿದೆ. ಮೀನುಗಾರಿಕಾ ಇಲಾಖೆ ಹೊಸ ಹೆಜ್ಜೆ ಇಟ್ಟಿದ್ದು, ಇಂದಿನ ಕಾರ್ಯಕ್ರಮದಿಂದ ಆತ್ಮವಿಶ್ವಾಸ ಇಮ್ಮಡಿಯಾಗಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. […]