ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ದಾಸರಹಳ್ಳಿ ಯುವಕನ ಮೃತದೇಹ ಪತ್ತೆ

4:18 PM, Saturday, July 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

Satyaveluಕಾಸರಗೋಡು : ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಅದು ಪಾಣೆಮಂಗಳೂರು ಸೇತುವೆಯಲ್ಲಿ ಜುಲೈ 28 ರಂದು ಮುಂಜಾನೆ ಬೈಕನ್ನು ನಿಲ್ಲಿಸಿ ನಾಪತ್ತೆಯಾಗಿದ್ದ  ಯುವಕನದೆಂದು ಗುರುತಿಸಲಾಗಿದೆ.

ಮೃತರನ್ನು ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29)ಎಂದು ಗುರುತಿಸಲಾಗಿದೆ.

ಕಾಸರಗೋಡು ಕರಾವಳಿ ಪೋಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದರು. ಈತನನ್ನು ಕಾಸರಗೋಡು ಪೋಲೀಸರು ಬೆಂಗಳೂರಿನಲ್ಲಿರುವ ಆತನ ಮನೆಯವರಿಗೆ ವಿಷಯ ತಿಳಿಸಿದ್ದು. ಇದೀಗ ಆತನ ಮನೆಯವರು ಕಾಸರಗೋಡಿಗೆ ಇಂದು ತಲುಪಿದ್ದು ಆತನ ಗುರುತು ಪತ್ತೆಹಚ್ಚಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಜುಲೈ 28 ರಂದು ಮನೆಯಿಂದ ಬೈಕ್‌ ನಲ್ಲಿ ತೆರಳಿದ್ದು ನಂತರ ನಾಪತ್ತೆಯಾಗಿದ್ದನು. ಈ ಬಗ್ಗೆ ಅವರ ತಾಯಿ ಬೆಂಗಳೂರು ಪೋಲೀಸರಿಗೆ ದೂರು ನೀಡಿದ್ದರು. ಈತನ್ಮದ್ಯೆ ಪಾಣೆಮಂಗಳೂರಿನ ಸೇತುವೆಯಲ್ಲಿ ಈತನ ಬೈಕ್‌ ಸ್ಟಾರ್ಟ್‌ ಮಾಡಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮೃತದೇಹ ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

     

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English