ಉಜಿರೆ : ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಗುರುವಾರ ಪತ್ತೆಯಾಗಿವೆ.
ಸ್ನಾನ ಘಟ್ಟದ ಸಿಬ್ಬಂದಿ ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಯಾತ್ರಾರ್ಥಿಗಳು ಬಂದು, ಅವರ ಬಳಿ ಮೃತದೇಹ ಇರುವುದಾಗಿ ತಿಳಿಸಿದ್ದಾರೆ.
ಅಂದಾಜು 40 ರಿಂದ 45 ವರ್ಷ ಮತ್ತು 20 ರಿಂದ 25 ವರ್ಷ ಪ್ರಾಯದ ಅಪರಿಚಿತ ಮಹಿಳೆಯರ ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿತ್ತು.
ಈ ಇಬ್ಬರು ಅಪರಿಚಿತ ಮಹಿಳೆಯರು ಯಾವುದೋ ಕಾರಣಕ್ಕೆ ನೀರಿಗೆ ಹಾರಿ ಅಥವಾ ಕಾಲು ಜಾರಿ ಬಿದ್ದು, ಮೃತಪಟ್ಟಿರಬಹುದು ಎಂಬ ಸಂದೇಹವಿದೆ.
ಅವರ ವಿಳಾಸ ಪತ್ತೆ ಮತ್ತು ಮುಂದಿನ ತನಿಖೆಗಾಗಿ ಧರ್ಮಸ್ಥಳ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಬಗ್ಗೆ ಅವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English