ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ

8:58 PM, Monday, February 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tobaco ಮಂಗಳೂರು : ಪುತ್ತೂರು ತಾಲೂಕು ಜಿಲ್ಲಾ ತಂಬಾಕು ನಿಯಂತ್ರಣ ದಳ ಹಾಗೂ ಪುತ್ತೂರು ತಾಲೂಕು ಉತ್ಪನ್ನಗಳ ನಿಯಂತ್ರಣ ತನಿಖಾ ದಳದಿಂದ ಪುತ್ತೂರು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಸಾರ್ವಜನಿಕ ಸ್ಥಳಗಳಿಗೆ ತಂಬಾಕು ಉತ್ಪನ್ನಗಳ ಸೇವನೆ COTPA 2003 ಕಾಯ್ದೆ ಉಲ್ಲಂಘಿಸುವವರ ಮೇಲೆ ಸೆಕ್ಷನ್ 4 ಹಾಗೂ 6 ಎ ಅಡಿಯಲ್ಲಿ 61 ಪ್ರಕರಣಗಳು ದಾಖಲಿಸಿ 10,970 ದಂಡ ವಿಧಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು. ತಂಬಾಕು ಉತ್ಪನ್ನ ಸೇವನೆಯಿಂದ ಮಾರಕ ರೋಗಗಳಾದ ಹೃದಯ ರೋಗ ಹಾಗೂ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ತಂಡದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ನಗರ ಪೊಲೀಸ್ ಠಾಣೆಯ ಎ.ಎಸ್. ವೆಂಕಟರಮಣ ಶ್ರೀಧರ್ ಮಣಿಯಾಣಿ, ಶ್ರೀ ಶೈಲಾ, ಶ್ರೀಧರ್, ಅಬಕಾರಿ ಇಲಾಖೆಯ ಸುಬ್ರಮಣ್ಯ ಪೈ, ಸುಜಾತ, ವಿಜಯ್ ಮತ್ತು ಯಲ್ಲಪ್ಪ, ಮಹಿಳಾ ಇಲಾಖೆಯ ಸಿಡಿಪಿಒ ಅಧಿಕಾರಿ ಶ್ರೀಲತಾ, ಪಶುವೈದ್ಯಕೀಯ ಇಲಾಖೆಯ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್, ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ನಿರ್ದೇಶಕ ರಾಜ್ ಗೋಪಾಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ತಾಲೂಕು ಆರೋಗ್ಯ ಕಛೇರಿಯ ರವಿಶಂಕರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಡಾ. ಹನುಮಂತರಾಯಪ್ಪ, ಕಛೇರಿ ಸಹಾಯಕಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English