ಕೆಳಗಿನ ಕುಂಜಾಡಿ ತರವಾಡು‌ ಮನೆಯಲ್ಲಿ ಏಪ್ರಿಲ್ 8 ಮತ್ತು 9ರಂದು ಧರ್ಮ ‌ನೇಮೋತ್ಸವ

10:50 PM, Friday, April 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Kunjadyಮಂಗಳೂರು :  ಕೆಳಗಿನ ಕುಂಜಾಡಿ ತರವಾಡು‌ ಮನೆಯ ಧರ್ಮ ‌ನೇಮೋತ್ಸವ ಏಪ್ರಿಲ್ 8 ಮತ್ತು 9ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು  ಸುಮಾರು 6 ದಶಕಗಳಿಂದ ನಿಂತು ಹೋಗಿದ್ದ  ಬಂಬಿಲಗುತ್ತು ಮೇಗಿನ ಕುಂಜಾಡಿ ಮತ್ತು ಕೆಳಗಿನ ಕುಂಜಾಡಿ ಮಧ್ಯಸ್ಥರ ಮುಂದಾಳತ್ವದಲ್ಲಿ ಈ ಧರ್ಮನೇಮೋತ್ಸವ ನಡೆಯುತ್ತವೆ ಎಂದರು.

ಕೊರೊನಾ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಟ್ಟು ನಾಲ್ಕು ದಿನಗಳ ಬದಲು ಎರಡು ‌ದಿನಗಳ ನೇಮೋತ್ಸವ ಮಾತ್ರ ‌ನಡೆಸುತ್ತಿದ್ದೇವೆ. ರಕ್ತೇಶ್ವರಿ, ಪಿಲಿಚಾಮುಂಡಿ ಸಹಿತ 13 ಪರಿವಾರ ದೈವಗಳ ನೇಮೋತ್ಸವ ನಡೆಯುವುದಾಗಿ ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ  ಅವಿಭಕ್ತ ಕುಟುಂಬ  ಬೇರೆ ಬೇರೆ ಯಾದುದರಿಂದ 12 ವರ್ಷಕ್ಕೊಮ್ಮೆ ನಡೆಯಬೇಕಾದ  ನೇಮೋತ್ಸವ 60 ವರುಷಗಳಿಂದ ನಡೆದಿಲ್ಲ ಎಂದರು.

ಈಗ ಕೊರೋನಾ ಕಾರಣ ಲಸಿಕೆ ನೀಡುವ ತನಕದ‌ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ನೇಮೋತ್ಸವ ನಡೆಸುತ್ತಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ‌ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದ. ಕ. ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ರವಿಶಂಕರ್ ಮಿಜಾರ್, ಕಸ್ತೂರಿ ಪಂಜ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English