ಶ್ರೀ ಕ್ಷೇತ್ರ ಕುಡುಪುವಿನಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ

12:46 PM, Wednesday, December 19th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Kudupu Templeಮಂಗಳೂರು :ಮಂಗಳವಾರ ಚಂಪಾಷಷ್ಠಿಯಂದು ಕರಾವಳಿಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಇಲ್ಲಿನ ಪ್ರಮುಖ ಕ್ಷೇತ್ರವಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಬ್ರಹ್ಮರಥೋತ್ಸವದ ಮೂಲಕ ನೆರವೇರಿತು.

ಮಾರ್ಗಶಿರ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ಪಂಚಮಿವರೆಗೆ ಕ್ಷೇತ್ರದ ಜಾತ್ರಾ ಮಹೋತ್ಸವ ಜರುಗಿತ್ತು. ಆರನೇ ದಿನವಾದ ಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ ಕೆರೆ. ಪೂರ್ವಭಾಗದಲ್ಲಿ 500ಕ್ಕೂ ಹೆಚ್ಚಿನ ನಾಗಶಿಲೆಗಳಿರುವ ನಾಗಬನವಿದೆ. ಕರಾವಳಿಯ ಪ್ರಮುಖ ಕ್ಷೇತ್ರವಾದ ಇಲ್ಲಿ ನಿತ್ಯ ಸಾವಿರಾರು ಜನ ಭಕ್ತರು ನಾಗ ದೋಷ ನಿವಾರಣೆಗಾಗಿ ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಇದಲ್ಲದೆ ಸುಳ್ಯದ ಜಾಲೂರಿನ ಅಡ್ಯಾರು ಸುಬ್ರಹ್ಮಣ್ಯ ದೇವಸ್ಥಾನ, ಕಳಂಜ ಸುಬ್ರಹ್ಮಣ್ಯ ದೇವಸ್ಥಾನ, ಬಂಟ್ವಾಳದ ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಸಜಿಪ ಮುನ್ನೂರು ಮುಗುಳಿ ಶ್ರೀ ಸುಬ್ರಹ್ಮಣ್ಯ ಮೊದಲಾದ ದೇವಸ್ಥಾನಗಳಲ್ಲಿ ಚಂಪಾಷಷ್ಠಿ ನೆರವೇರಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English