ಶ್ರೀ ಕ್ಷೇತ್ರ ಕುಡುಪುವಿನಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ
Wednesday, December 19th, 2012ಮಂಗಳೂರು :ಮಂಗಳವಾರ ಚಂಪಾಷಷ್ಠಿಯಂದು ಕರಾವಳಿಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಇಲ್ಲಿನ ಪ್ರಮುಖ ಕ್ಷೇತ್ರವಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಬ್ರಹ್ಮರಥೋತ್ಸವದ ಮೂಲಕ ನೆರವೇರಿತು. ಮಾರ್ಗಶಿರ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ಪಂಚಮಿವರೆಗೆ ಕ್ಷೇತ್ರದ ಜಾತ್ರಾ ಮಹೋತ್ಸವ ಜರುಗಿತ್ತು. ಆರನೇ ದಿನವಾದ ಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ […]