ಹುಬ್ಬಳ್ಳಿ: ಯಾರ ನೆರಳು ಕಂಡರೆ ಅಪವಿತ್ರ ಎಂದು ನಂಬಿದ್ದರೋ ಅವರ ಲೇಖನಿ ಇಂದು ದೇಶದ ಹಣೆಬರಹ ಬರೆದಿದೆ. ಶೋಷಿತರ ಕೈಗೆ ಲೇಖನಿ ಕೊಟ್ಟ ಮಹಾವ್ಯಕ್ತಿ ಡಾ. ಬಿ. ಆರ್ ಅಂಬೇಡ್ಕರ್ ಎಂದು ಶಾಸಕ ಅಬ್ಬಯ್ಯ ಪ್ರಸಾದ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಮಿನಿ ವಿಧಾನಸೌಧದ ತಾ.ಪಂ ಸಭಾಭವನದಲ್ಲಿ ಆಯೋಜಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ್ ಜಯಂತಿ ರಾಷ್ಟ್ರೀಯ ಹಬ್ಬ, ಇದನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುವುದು. ವ್ಯಕ್ತಿ ಪೂಜೆಯನ್ನು ಖಂಡಿಸುತ್ತಿದ್ದ ಅಂಬೇಡ್ಕರ್ ನನ್ನನ್ನು ಪೂಜೆ ಮಾಡಬೇಡಿ, ನನ್ನ ತತ್ವ ಚಿಂತನೆಗಳನ್ನು ಅನುಸರಿಸಿ ಎಂದು ಹೇಳುತ್ತಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ಬೇಧ ಭಾವ ಇಲ್ಲದೆ ಮತದಾನದ ಹಕ್ಕು ನೀಡಿದರು. ಪ್ರಜಾಪ್ರಭುತ್ವ ಅಳವಡಿಸಿಕೊಂಡು ರಾಷ್ಟ್ರ ಪ್ರಗತಿ ಹೊಂದಲು ಕಾರಣರಾದರು. ಮಹಿಳೆಯರಿಗೆ ಮತದಾನ, ಶಿಕ್ಷಣ, ಸಾಮಾಜಿಕ, ಆಸ್ತಿ ಹಕ್ಕು ನೀಡಿದರು.
ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಮೀಸಲಿಸಿರುವುದು ತಪ್ಪು. ವಿಶ್ವವೇ ಮೆಚ್ಚುವಂತ ಒಳ್ಳೆಯ ಸಂವಿಧಾನ ನೀಡಿ ವಿಶ್ವಮಾನವ ಎನಿಸಿಕೊಂಡಿದ್ದಾರೆ. ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ಒದಗಿಸುವುದಕ್ಕೆ ಮೀಸಲಾತಿ ನೀಡಿದ ಅವರ ಕ್ರಮವನ್ನು ವಿರೋಧಿಸುವುದು ಮತ್ತು ಅಸೂಯೆ ಪಡುವುದು ಒಳ್ಳೆಯದಲ್ಲ. ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಅವರನ್ನು ನಾವು ಗೌರವಿಸುವುದೇ ಆದರೆ ಸಂವಿಧಾನವನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂದರು.
ಕೊರೋನಾ ಸಂದರ್ಭದಲ್ಲಿ ಸಮಾಜ ಮುಖಿ ಕೆಲಸ ಮಾಡಿದವರು, ಕ್ರೀಡೆಯಲ್ಲಿ ಸಾಧನೆ ಮಾಡಿದವರು, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜಕಿರಣ ಶಿರಗಾಂವಿ, ಚೈತ್ರಾ ಯಾದಗಿರಿ, ಅನಿಲ ಬುಗಡಿ, ಅನ್ನಪೂರ್ಣ ಸಾಗರ, ಸವಿತಾ ಭಂಡಾರಿ, ಬಸವರಾಜ ತಿರಮಲಕೊಪ್ಪ, ರಜತಕುಮಾರ ಕಾಂಬ್ಳೆ, ಪ್ರತಾಪ ಛಲವಾದಿ, ಲಕ್ಷ್ಮೀ ನಿಂಗಪ್ಪ ರವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾಥರ್ಿಗಳಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಸಹಾಯವಾಗಲಿ ಎಂದು ವಿದ್ಯಾಥರ್ಿಗಳಿಗೆ ನೀಡಲು ಶಾಲಾ ಪ್ರಾಚಾರ್ಯರರಿಗೆ “ಸಂವಿಧಾನ ಓದು” ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ನಗರ ತಹಶೀಲ್ದಾರರಾದ ಶಶಿಧರ ಮಾಡ್ತಾಳ, ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ, ಇಓ ಗಂಗಾಧರ ಕಂದಕೂರ, ದಲಿತ ಸಂಘಗಳ ಮುಖಂಡರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕಿ ಭವಿಷ್ಯಾ ಮಾಟರ್ೀನ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು, ಈಶ್ವರಮ್ಮ ಪಾಟೀಲ ವಂದಿಸಿದರು, ಸಕ್ಕೂಬಾಯಿ ವಾಲಿಕಾರ ನಿರೂಪಿಸಿದರು.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ.
Click this button or press Ctrl+G to toggle between Kannada and English