ಮಂಗಳೂರು : ಕೊರೋನಾ ಮಾರ್ಗ ಸೂಚಿ ಪ್ರಕಾರ ಸರಕಾರ ಕ್ಷಣಕ್ಕೊಂದು ನಿರ್ಧಾರ ತಳೆದು ಜನರನ್ನು ಸಂಪೂರ್ಣ ಗೊಂದಲ ಹಾಗೂ ಭಯಭೀತ ಗೊಳಿಸಿದ್ದು, ಸರಕಾರ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಹೇಳಿದ್ದು, ಇದೀಗ ಹಿಂಬಾಗಿಲ ಮೂಲಕ ಸಾರ್ವಜನಿಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಅಘೋಷಿತ ಸಂಪೂರ್ಣ ಲಾಕ್ ಡೌನ್ ಸ್ಥಿತಿಗೆ ತಂದಿದೆ.
ಕೊರೋನಾ ನಿಯಂತ್ರಣ ಇರುವ ಪ್ರದೇಶದಲ್ಲಿ ಕೂಡ ವ್ಯವಹಾರ ಮಳಿಗೆಗಳನ್ನು ಏಕಾಏಕಿ ಬಲವಂತ ಮುಚ್ಚಲು ಆರಂಭಿಸಿದೆ. ಸರಕಾರದ ಈ ಕ್ರಮ ಮುಂದಿನ ತಿಂಗಳು ಮೇ 4 ನೇ ತಾರೀಖು ವರೆಗೆ ಅಘೋಷಿತ ಕರ್ಫ್ಯೂ ಹೆಸರಲ್ಲಿ ಲಾಕ್ ಡೌನ್ ಮಾಡುವ ಹುನ್ನಾರ ದಂತೆ ಕಾಣುತ್ತದೆ. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಅವರ ಹಿಂದಿನ ಅನಾರೋಗ್ಯದ ಬಗ್ಗೆ ವಿಚಾರಿಸದೆ, ಅದಕ್ಕೆ ಸರಿಯಾದ ಔಷದಿ ನೀಡದೆ ರೋಗಿಗಳನ್ನು ಮೃತ್ಯು ಕೂಪಕ್ಕೆ ತಳ್ಳುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಧಕ್ಷ ಅಧಿಕಾರಿಯಾದ ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಶೀಘ್ರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರಕಾರದ ಇಂತಹ ಬೇಜವಾಬ್ದಾರಿತನವನ್ನು ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದು ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.
Click this button or press Ctrl+G to toggle between Kannada and English