ವಿದ್ಯುತ್ ಖಾಸಗೀಕರಣದ ಮೂಲಕ ದೇಶವನ್ನೇ ಕತ್ತಲು ಮಾಡುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

Thursday, November 2nd, 2023
citu

ಮಂಗಳೂರು : ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ,ವಿತರಣೆ ಹಾಗೂ ಕಂದಾಯ ಆಕರಣೆ ಇದ್ಯಾವುದನ್ನೂ ಸರಕಾರ ಮಾಡಬಾರದು. ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು, ದೇಶದ ಸಂಪತ್ತನ್ನು ಮಾರಲು ಹೊರಟ ಕೇಂದ್ರ ಸರಕಾರದ ಧೋರಣೆ ಏನೆಂಬುದು ಜಗಜ್ಜಾಹೀರಾಗಿದೆ. ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕತ್ತಲು ಮಾಡಲು ಹೊರಟಿದೆ. ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು […]

ಕೋಟ್ಯಂತರ ಬೆಲೆಬಾಳುವ ದ. ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಟ್ಟಡ ಸರಕಾರದ ವಶಕ್ಕೆ

Tuesday, February 15th, 2022
Co operative workers

ಮಂಗಳೂರು  : ನಗರದ ಹೃದಯಭಾಗದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸ೦ಘದ ಸ್ವಾಧೀನ ಮತ್ತು ಒಡೆತನಕ್ಕೊಳಪಟ್ಟ ಮ೦ಗಳೂರು ತಾಲೂಕು ಅತ್ತಾವರ ಗ್ರಾಮದ ಸರ್ವೆ ನಂ.278/2B ಗೆ ಒಳಪಟ್ಟ 33 ಸೆಂಟ್ಸ್ ಸ್ಥಳದ ಪಹಣಿಯನ್ನು ರದ್ದುಪಡಿಸಿ ಸರಕಾರದ ಹೆಸರಿಗೆ ನಿಹಿತ ಪಡಿಸುವಂತೆ ಹಾಗೂ ಸದರಿ ಸ್ಥಿರಾಸ್ಥಿಯಲ್ಲಿರುವ ಕಟ್ಟಡವನ್ನು ಜಿಲ್ಲಾ ಸಂಘದ ಸ್ವಾಧೀನತೆಯಿಂದ ಬಿಡಿಸಿ ಸರಕಾರದ ವಶಕ್ಕೆ ಪಡೆದು ಅಕ್ರಮ ಎಸಗಿದ ಸಂಬಂಧಪಟ್ಟ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಭೂ ಕಂದಾಯ ಕಾಯ್ದೆ 192 […]

ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಎಂದು ಹೇಳಿ, ಸರಕಾರ ಈಗ ಮಾಡುತ್ತಿರುವುದೇನು ?

Friday, April 23rd, 2021
Market Bundh

ಮಂಗಳೂರು : ಕೊರೋನಾ ಮಾರ್ಗ ಸೂಚಿ ಪ್ರಕಾರ ಸರಕಾರ ಕ್ಷಣಕ್ಕೊಂದು ನಿರ್ಧಾರ ತಳೆದು ಜನರನ್ನು ಸಂಪೂರ್ಣ ಗೊಂದಲ ಹಾಗೂ ಭಯಭೀತ ಗೊಳಿಸಿದ್ದು, ಸರಕಾರ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಹೇಳಿದ್ದು, ಇದೀಗ ಹಿಂಬಾಗಿಲ ಮೂಲಕ ಸಾರ್ವಜನಿಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಅಘೋಷಿತ ಸಂಪೂರ್ಣ ಲಾಕ್ ಡೌನ್ ಸ್ಥಿತಿಗೆ ತಂದಿದೆ. ಕೊರೋನಾ ನಿಯಂತ್ರಣ ಇರುವ ಪ್ರದೇಶದಲ್ಲಿ ಕೂಡ ವ್ಯವಹಾರ ಮಳಿಗೆಗಳನ್ನು ಏಕಾಏಕಿ ಬಲವಂತ ಮುಚ್ಚಲು ಆರಂಭಿಸಿದೆ. ಸರಕಾರದ ಈ ಕ್ರಮ ಮುಂದಿನ […]

ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಪ್ರಸ್ತಾಪಗಳು ಸರಕಾರದ ಮುಂದಿಲ್ಲ: ಶಾಸಕ ಕಾಮತ್ ಸ್ಪಷ್ಟನೆ

Wednesday, September 16th, 2020
Income tax Road

ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. […]

ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ ಮೈಸೂರು ವೈದ್ಯಾಧಿಕಾರಿಯನ್ನು ಬಲಿ ಪಡೆದಿದೆ

Saturday, August 22nd, 2020
dyfi

ಮಂಗಳೂರು  : ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಕೊರೊನಾ ಪ್ರಕರಣ ನಿಭಾಯಿಸಲು ವೈದ್ಯರು ಸಹಿತ ನುರಿತ ಸಿಬ್ಬಂಧಿಗಳ ವ್ಯವಸ್ಥೆ ಮಾಡದೆ ಬರೇ ಇರುವ ವೈದ್ಯರುಗಳಿಂದಲೇ ವಿಪರೀತ ಕೆಲಸಗಳನ್ನು ನಿರ್ವಹಿಸಿದ ಕಾರಣ ಒತ್ತಡಕ್ಕೆ ಸಿಲುಕಿದ ವೈದ್ಯರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯ ನಿರ್ಮಾಣ ಇದು ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ. ಮೈಸೂರಿನ ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರ ಅವರನ್ನು ಬಲಿಪಡೆದಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಉರ್ವಸ್ಟೋರ್ ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಸರಕಾರಿ […]

ಲಾಲಾಜಿ ಅವರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನೇಮಕ ಹಿಂಪಡೆದ ಸರಕಾರ

Monday, July 27th, 2020
lalaji mendon

ಉಡುಪಿ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅವರನ್ನು ನೇಮಕ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್ಯ ಸರಕಾರ ಆದೇಶವನ್ನು ಹಿಂಪಡೆದುಕೊಂಡಿದೆ. ಮಧ್ಯಾಹ್ನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಅವರ ಅಧ್ಯಕ್ಷ ಸ್ಥಾನವನ್ನು ಸಂಜೆ ವಾಪಸ್ ಪಡೆಯಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ದಿಢೀರ್ ನಿರ್ಧಾರಕ್ಕೆ ನಿಖರವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ.  ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ […]

ಆದಾಯವನ್ನು ಹೆಚ್ಚಿಸಲು ಸರಕಾರಗಳು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು !

Wednesday, May 6th, 2020
ಆದಾಯವನ್ನು ಹೆಚ್ಚಿಸಲು ಸರಕಾರಗಳು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು !

ಮಂಗಳೂರು  : ಒಂದೆಡೆ ಕೊರೋನಾದ ರೋಗಾಣುವಿನ ಸೊಂಕಿನಿಂದಾಗಿ ಜನರ ಜೀವಕ್ಕೆ ಅಪಾಯವಾಗದಿರಲೆಂದು ಸರಕಾರಗಳು ಆರ್ಥಿಕ ಹಾನಿಯನ್ನು ಸಹಿಸಿಕೊಳ್ಳುತ್ತಾ ‘ಲಾಕ್‌ಡೌನ್’ನ ಧೈರ್ಯದ ಹಾಗೂ ಸ್ವಾಗತರ್ಹ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ ಇನ್ನೊಂದೆಡೆ ಕೇವಲ ಆದಾಯ ಹೆಚ್ಚಾಗಿಸಲು ಮದ್ಯದ ಅಂಗಡಿಯನ್ನು ತೆರೆಯುವ ನಿರ್ಣಯವನ್ನು ತೆಗೆದುಕೊಂಡಿದೆ. ಆದ್ದರಿಂದ ದೇಶದಲ್ಲಿ ಕೊರೋನಾದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಇದನ್ನು ಹೊರತು ಪಡಿಸಿ ಮದ್ಯದಿಂದಾಗಿ ಮಹಿಳೆಯರ ಮೇಲಾಗುವ ದೌರ್ಜನ್ಯ, ಮಕ್ಕಳ ಮೇಲಾಗುವ ಕುಸಂಸ್ಕಾರ ಹಾಗೂ ಲಕ್ಷಗಟ್ಟಲೆ ಸಂಸಾರ ನಾಶವಾಗಲು ಈ ನಿರ್ಣಯದ ಕಾರಣವಾಗಬಾರದು, ಅದರೊಂದಿಗೆ ಸಮಾಜದ ಸರ್ವತೋಮುಖ […]

ಕಾರ್ಮಿಕರನ್ನು ನಿರ್ಲಕ್ಷಿಸಿದೆ ಸರಕಾರಕ್ಕೇ ತೊಂದರೆ

Wednesday, January 8th, 2020
mushkara

ಮಂಗಳೂರು : ಕಾರ್ಮಿಕರ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ, ಕೆಲಸದ ಭದ್ರತೆ ಮುಂತಾದುವುಗಳು ಸರಕಾರದ ಹೊಣೆಯಾಗಿದೆ. ದೇಶದ ಸಂಪತ್ತಿನ ಉತ್ಪಾದಕರು ಕಾರ್ಮಿಕರು. ಅಂತಹ ಕಾರ್ಮಿಕ ವರ್ಗವನ್ನು ಸರಕಾರ ಒಟ್ಟಾರೆಯಾಗಿ ನಿರ್ಲಕ್ಷಿಸುತ್ತಿದೆ. ಸರಕಾರದ ಮುಂದಿಟ್ಟಿರುವ ನಮ್ಮ12 ಅಂಶಗಳ ಬೇಡಿಕೆಗಳು ಜೀವನ ನಿರ್ವಹಣೆಗಿರುವ ಕನಿಷ್ಠ ಬೇಡಿಕೆಗಳು. ಇಂದಿನ ಮುಷ್ಕರದ ಮೂಲಕ ನಾವು ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ಕಾರ್ಮಿಕ ದಂಗೆಯೆದ್ದರೆ ಸರಕಾರಕ್ಕೇ ತೊಂದರೆ.’ ಎಂದು ಸಿಐಟಿಯುನ ದಕ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸರಕಾರವನ್ನು ಎಚ್ಚರಿಸಿದರು. ಅವರು ಕಾರ್ಮಿಕ ಸಂಘಟನೆಗಳ […]

ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

Wednesday, November 28th, 2018
ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

ಬೆಂಗಳೂರು: ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ ಆಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಮೋದಿ ಸರಕಾರ ಬೆಳೆ ವಿಮೆಯಲ್ಲಿ ರೈತರ ಹಣವನ್ನು ಲೂಟಿ ಮಾಡಿದೆ. ಬೆಳೆವಿಮೆಯಲ್ಲಿ ಕೇಂದ್ರದ ಅವ್ಯವಹಾರ ನಡೆದಿದೆ. ರಫೇಲ್ ಹಗರಣದಂತೆ ಬೆಳೆ ವಿಮೆಯಲ್ಲೂ ಹಗರಣ ನಡೆದಿದೆ. ರಫೆಲ್ ಗಿಂತ ದೊಡ್ಡ ಹಗರಣ ಇದು. ಅಲ್ಲಿ 15 ಸಾವಿರ ಕೋಟಿ ರುಪಾಯಿ ಅಕ್ರಮವಾಗಿದೆ. ಇಲ್ಲಿ ಸದ್ಯ […]