ಮಂಗಳೂರು : ಬಾಕ್ಸೈಟ್ ಮೈನಿಂಗ್ ವ್ಯವಹಾರದಲ್ಲಿದ್ದ ಕೇರಳ ಮೂಲದ ಉದ್ಯಮಿ ಯೊಬ್ಬರನ್ನು ಸುಮಾರು ಎರಡೂವರೆ ತಿಂಗಳ ಕಾಲ ಒತ್ತೆಯಾಳಾಗಿರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಳ್ನೀರ್ ನಿವಾಸಿ ದಿವ್ಯದರ್ಶನ (33) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕುರಿತು ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ದುಬೈನಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು 2019-20ನೆ ಸಾಲಿನ ಅವಧಿಯಲ್ಲಿ ಜೀವ ಬೆದರಿಕೆ ಇದೆ ಎಂಬುದಾಗಿ ಹೇಳಿ ಅವರನ್ನು ತನ್ನ ಫ್ಲ್ಯಾಟ್‌ನಲ್ಲಿ ದಿವ್ಯದರ್ಶನ ಇರಿಸಿದ್ದ ಎಂದು ಹೇಳಿದರು.
ತನ್ನದೇ ಸಹಚರರಿಂದ ಹನೀಫ್‌ಗೆ ಜೀವ ಬೆದರಿಕೆಯ ಭಯ ಹುಟ್ಟಿಸಿ ಅವರಿಂದ ಒಂದು ಬಾರಿ 30 ಲಕ್ಷ ಹಾಗೂ ಇನ್ನೊಂದು ಬಾರಿ 55 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಲ್ಲದೆ, ಶಸ್ತ್ರಾಸ್ತ್ರದ ಮೂಲಕ ಜೀವ ಬೆದರಿಕೆಯನ್ನು ಇರಿಸಿದ್ದ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಹನೀಫ್‌ರವರ ಸಹೋದನ ವ್ಯವಹಾರಕ್ಕೆ ಸಂಬಂಧಿಸಿ ನೆರವು ನೀಡುವ ನೆಪದಲ್ಲಿ ಅವರ ಜಾಗ್ವಾರ್ ಕಾರನ್ನು ಉಪಯೋಗಿಸಿ ತಾನೇ ಇರಿಸಿಕೊಂಡಿದ್ದ ಎಂದೂ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ದುಬೈನಲ್ಲಿ ಕೆಲಸದಲ್ಲಿದ್ದ ಮುಹಮ್ಮದ್ ಹನೀಫ್ ಊರಿಗೆ ಬಂದು ಬಿಸಿನೆಸ್ ಮಾಡಬೇಕೆಂದು ಮುಂದಾಗಿದ್ದು, ಅದಕ್ಕಾಗಿ ವಿಟ್ಲದಲ್ಲಿ ಬಾಕ್ಸೈಟ್ ಮೈನಿಂಗ್ ಆರಂಭಿಸಲು ಪರವಾನಿಗೆಗೆ ಮುಂದಾದಾಗ ದಿವ್ಯದರ್ಶನ ಜತೆ ಸಂಪರ್ಕವಾಗಿ ಹನೀಫ್‌ಗೆ ಜೀವ ಬೆದರಿಕೆಯ ವೀಡಿಯೋ ತೋರಿಸಿ ಅಲ್ಲಿದ್ದ ವ್ಯವಹಾರವನ್ನು ಡೀಲ್ ಮಾಡಿಕೊಳ್ಳಲು ದಿವ್ಯದರ್ಶನ ದುಬೈಗೂ ಹೋಗಿ ಬಂದಿದ್ದ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಮುಹಮ್ಮದ್ ಹನೀಫ್‌ರವರು ನೀಡಿದ ದೂರಿನ ಮೇರೆಗೆ ಬಂಧನ ಮಾಡಲಾಗಿದೆ. ಈತನ ಏಳೆಂಟು ಮಂದಿ ಸಹಚರರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕಮಾರ್ ತಿಳಿಸಿದರು.
Click this button or press Ctrl+G to toggle between Kannada and English