ಕಾರ್ಕಳ: ಆಸ್ಪತ್ರೆ ಸಿಬಂದಿಯ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಶವ ಬದಲಾಗಿರುವುದು ಸಂಬಂಧಿಕರಿಗೆ ತಿಳಿದು ಶವವನ್ನು ವಾಪಸ್ ಕಳಿಸಿದ ಘಟನೆ ಸೋಮವಾರ ನಡೆದಿದೆ.
ಅಂತ್ಯ ಸಂಸ್ಕಾರಕ್ಕೆಂದು ಕಾರ್ಕಳದ ಕರಿಯಕಲ್ಲು ಸ್ಮಶಾನಕ್ಕೆ ಮೃತ ದೇಹ ತಂದಿದ್ದ ವೇಳೆ ಈ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶೃಂಗೇರಿ ಮೂಲದ 44 ರ ವಯಸ್ಸಿನ ವ್ಯಕ್ತಿ ಕಾರ್ಕಳದ ತನ್ನ ಪತ್ನಿ ಮನೆಗೆ ಬಂದಿದ್ದ ಅವರಿಗೆ ಸೋಂಕು ದೃಢ ಪಟ್ಟಿತ್ತು. ಮಂಗಳೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಶವವನ್ನು ಸಂಸ್ಕಾರ ಮಾಡಲೆಂದು ಕರಿಯಕಲ್ಲು ರುದ್ರಭೂಮಿಗೆ ಅಂಬುಲೆನ್ಸ್ ಮೂಲಕ ತಂದಿದ್ದು ಸಂಬಂಧಿಕರಿಗೆ ಶವ ಅದಲು ಬದಲಾಗಿರುವುದು ಗೊತ್ತಾಗಿದೆ. ಶವ ತಮಗೆ ಸೇರಿದ ವ್ಯಕ್ತಿಯದ್ದಲ್ಲ ಎಂದು ಮನವರಿಕೆಯಾದ ಬಳಿಕ ವಾಪಸ್ ಕಳಿಸಲಾಗಿದೆ.
ಆಸ್ಪತ್ರೆ ಸಿಬಂದಿಯ ಎಡವಟ್ಟಿನಿಂದ ಈ ರೀತಿ ಆಗಿದೆ ಎನ್ನಲಾಗಿದೆ. ಆಸ್ಪತ್ರೆಯ ಬೇಜಾವಾಬ್ದಾರಿಗೆ ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English