ಆತ್ಮಸ್ಥೈರ್ಯದಿಂದಲೇ ಕೊರೋನಾ ಹಿಮ್ಮೆಟ್ಟಿಸಿದ ಶಿವಳ್ಳಿಮಠ ಕುಟುಂಬ

1:03 PM, Monday, May 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

Shivalli Mata Family

ಹುಬ್ಬಳ್ಳಿ : ಎಲ್ಲಾ ಜೀವಿಗಳಿಗಿಂತ ಮಾನವ ಬುದ್ಧಿಜೀವಿ. ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ, ಹೊಸವಿಚಾರಗಳನ್ನು ಕಲಿಯುತ್ತಾ, ತನ್ನ ಜೀವನಶೈಲಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುವ ವಸ್ತುಗಳನ್ನು ತಾನೇ ತಯಾರಿಸುತ್ತಾ, ಅತ್ಯಂತ ವೇಗವಾಗಿ ಸಾಗುತ್ತಿದ್ದ ಮನುಷ್ಯನ ಜೀವನಕ್ಕೆ ಒಮ್ಮೆಲೇ ಬ್ರೇಕ್ ಹಾಕಿದ್ದು ಚೀನಾ ಮೂಲದ ಕರೋನಾ ವೈರಸ್.

ಕೋವಿಡ್ -19 ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಈ ವೈರಸ್ ಮಾನವ ಜೀವನಶೈಲಿಯನ್ನು ಬದಲಾಯಿಸಿತು, ರೋಗದಿಂದ ಪಾರಾಗಿ ಬದುಕುಳಿಯಲು ಮಾನವಕುಲ ಹರಸಾಹಸಪಡುವ ಸ್ಥಿತಿಗೆ ಬಂದು ನಿಲ್ಲುವಂತೆ ಮಾಡಿತು, ಶ್ವಾಸಕೋಶದ ಮೂಲಕ ಮಾನವ ದೇಹ ಸೇರುವ ಈ ಸೂಕ್ಷ್ಮಣು ವೈರಸ್ ನಿರ್ಲಕ್ಷ ತೋರಿದರೆ ಉಸಿರನ್ನೇ ನಿಲ್ಲಿಸಿಬಿಡುತ್ತದೆ.

ಇದರ ಹೊಡೆತದಿಂದ ಇಡೀ ವಿಶ್ವವೇ ನಲುಗುತ್ತಿದೆ, ವೈದ್ಯರು ನಮ್ಮನ್ನೆಲ್ಲ ರಕ್ಷಿಸಲು ಹಗಲು-ರಾತ್ರಿ ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ಕರೋನಾವನ್ನು ಗೆದ್ದು ನಮಗೆಲ್ಲ ಮಾದರಿಯಾಗಿ ನಿಂತವರೂ ಇದ್ದಾರೆ, ಇಂತಹವರ ಸಾಲಿನಲ್ಲಿ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿಮಠ ಕುಟುಂಬ ಸದಸ್ಯರು ಸಹ ಸೇರ್ಪಡೆಯಾಗಿದ್ದಾರೆ. ಕೊರೋನಾ ಬಂದರೂ ಕುಗ್ಗದೇ, ಭಯಪಡದೆ, ಆತ್ಮಸ್ಥೈರ್ಯದಿಂದಲೇ ಅದನ್ನು ಹಿಮ್ಮೆಟ್ಟಿಸಿದ ಕುಟುಂಬ ಇವರದ್ದು.

ಕುಟುಂಬದ 24 ಜನ ಸದಸ್ಯರು ಕಳೆದ ಎಪ್ರಿಲ್ ತಿಂಗಳಲ್ಲಿ ಬ್ಯಾಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು, ಏಪ್ರಿಲ್ 24 ರಂದು ಸಹೋದರರಿಬ್ಬರು ಪರೀಕ್ಷೆ ಮಾಡಿಸಿಕೊಂಡರು 27 ರಂದು ಅವರಿಬ್ಬರ ವರದಿ ಪಾಸಿಟಿವ್ ಬಂದಿತ್ತು, ನಂತರ ಉಳಿದ 22 ಜನ ಸದಸ್ಯರು ಪರೀಕ್ಷೆ ಮಾಡಿಸಿಕೊಂಡಿದ್ದರು ಇವರಲ್ಲಿ 14 ಜನರ ವರದಿ ಪಾಸಿಟಿವ್ ಬಂದಿತ್ತು. ಒಟ್ಟು ಕುಟುಂಬದ 24 ಜನ ಸದಸ್ಯರಲ್ಲಿ 16 ಜನರಗೆ ಕೊರೋನಾ ಸೋಂಕು ತಗಲಿತ್ತು. ಚಿಕ್ಕ ಮಕ್ಕಳು ಮತ್ತು 2 ಡೋಸ್ ವ್ಯಾಕ್ಸಿನ್ ಪಡೆದ ಹಿರಿಯ ಸದಸ್ಯರು ಸಹ ಇದಕ್ಕೆ ಹೊರತಾಗಿರಲಿಲ್ಲ.

ಕೊರೋನಾ ಸೋಂಕು ತಗಲಿದವರ ವಿವರ:
ರಾಜು(34), ಶ್ರೇಯಾ(10 ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ(2), ಸಹನಾ(16) ವೈಷ್ಣವಿ(2), ಗಿರಿಜಮ್ಮ(60) ಶರಣಯ್ಯ(9), ಮಲಯ್ಯ(63), ಮಹಾಂತಯ್ಯ (60), ಸಿದ್ದರಾಮಯ್ಯ (59), ಮಲ್ಲಿಕಾಜರ್ುನ (25), ಮಲ್ಲಿಕಾರ್ಜುನಯ್ಯ (28), ಮೃತ್ಯುಂಜಯ (27).

ಭಯಪಡದೆ ಕುಟುಂಬ ಸದಸ್ಯರು ಹೋಮ್ ಐಸೋಲೇಶನ್ ನಲ್ಲಿಯೇ ಇದ್ದು ಚಿಕಿತ್ಸೆ ಪಡೆದುಕೊಳ್ಳುವುದಾಗಿ ತೀರ್ಮಾನಿಸಿ, ವೈದ್ಯರ ಸಲಹೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದರ ಜೊತೆಗೆ ಸಾಮಾಜಿಕ ಅಂತರ, ಬಿಸಿ ನೀರಿನ ಉಗಾ( ಸ್ಟೀಮ್), ಕಷಾಯ, ಬಿಸಿಯಾದ ಆಹಾರ, ಬಿಸಿ ನೀರಿನ ಸೇವನೆ ಮಾಡುವುದರೊಂದಿಗೆ ಯೋಗಾಸನ, ಪ್ರಾಣಾಯಾಮ ಮಾಡುವುದರ ಮೂಲಕ ಇದೀಗ ಎಲ್ಲಾ ಸದಸ್ಯರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ರೋಗದ ಲಕ್ಷಣ ಕಂಡು ಬಂದಾಗ ಭಯ ಪಡೆದೆ, ಮಾನಸಿಕವಾಗಿ ಕುಗ್ಗದೆ, ಆತ್ಮಸ್ಥೈರ್ಯದಿಂದ ಇದ್ದು ವೈದ್ಯರ ಸಲಹೆ ಪಡೆದು, ಅವರ ಸೂಚನೆಯಂತೆ ಚಿಕಿತ್ಸೆಗೆ ಒಳಗಾಗಿ ರೋಗದಿಂದ ಮುಕ್ತವಾಗಬಹುದು. ನಾವು ಹೆದರಿದರೆ ರೋಗದಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲ, ಅದೇ ನಾವು ಧೈರ್ಯದಿಂದ ಇದ್ದರೆ ಆದಷ್ಟು ಬೇಗನೆ ಸಾಮಾನ್ಯ ಸ್ಥಿತಿಗೆ ಬರಬಹುದು ಎಂಬುದು ಕುಟುಂಬ ಸದಸ್ಯ ಮಲ್ಲಿಕಾರ್ಜುನ ಅವರ ಅಭಿಪ್ರಾಯ.

ಕೊರೋನಾ ಲಸಿಕೆಯ 2 ಡೋಸ್ ಪಡೆದುಕೊಂಡ ಕುಟುಂಬದ ಹಿರಿಯರು ಎಲ್ಲರಿಗಿಂತ ವೇಗವಾಗಿ ಗುಣಮುಖರಾಗಿದ್ದಾರೆ. ಮೂರು ವರ್ಷದೊಳಗಿನ 4 ಜನ ಮಕ್ಕಳು ಸಹ ವೈದ್ಯಕೀಯ ನೆರವಿನಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. ಸಾಧ್ಯವಾದಷ್ಟು ಬೇಗನೇ ಹಿಂಜರಿಕೆಯಿಲ್ಲದೆ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು, ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ಸರಿಯಾದ ರೀತಿಯಲ್ಲಿ ಅದನ್ನು ಪಾಲಿಸಬೇಕು. ಇದರಿಂದಾಗಿ ಕೊರೋನಾ ರೋಗದಿಂದ ಬಹುಬೇಗ ಗುಣಮುಖರಾಗಲು ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿದೆ ಈ ಕುಟುಂಬ.

ಎಲ್ಲರೂ ಗುಂಪು ಸೇರುವುದನ್ನು ಬಿಟ್ಟು, ಸಾಮಾಜಿಕ ಅಂತರ ಕಾಯ್ದುಕೊಂಡು, ವೈರಸ್ ಹರಡುವುದನ್ನು ತಪ್ಪಿಸಿ ನಮ್ಮನ್ನು, ನಮ್ಮ ಕುಟುಂಬವನ್ನು, ನಮ್ಮ ದೇಶವನ್ನು ಕಾಪಾಡಿಕೊಳ್ಳೋಣ.

ಲೇಖನ : ಮೇಘನಾ ಪಾಟೀಲ.

meghana

image description

1 ಪ್ರತಿಕ್ರಿಯೆ - ಶೀರ್ಷಿಕೆ - ಆತ್ಮಸ್ಥೈರ್ಯದಿಂದಲೇ ಕೊರೋನಾ ಹಿಮ್ಮೆಟ್ಟಿಸಿದ ಶಿವಳ್ಳಿಮಠ ಕುಟುಂಬ

  1. Naveena kumar, Menedhal

    koppal district menedhal village

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English