ಮೇ 26ರ ಚಂದ್ರಗ್ರಹಣದ ಗೋಚರ ಮತ್ತು ಪರಿಣಾಮ

12:02 PM, Tuesday, May 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Lunar Eclipsಬೆಂಗಳೂರು  : ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣವು ಇದೇ ಬುಧವಾರ ಮೇ 26ರಂದು ನಡೆಯಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಚಂದ್ರಗ್ರಹಣ ಮೇ 26ರ ಮಧ್ಯಾಹ್ನ 2.17ಕ್ಕೆ ಪ್ರಾರಂಭವಾಗಲಿದ್ದು ಸಂಜೆ 7.19ಕ್ಕೆ ಕೊನೆಗೊಳ್ಳಲಿದೆ.

ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಗ್ರಹಣ ಕಾಣಿಸಿಕೊಳ್ಳಲಿದ್ದು ಇದನ್ನು ಉಪಛಾಯಾ ಗ್ರಹಣವೆಂದಯ ಕರೆಯುತ್ತಾರೆ. ಗ್ರಹಣದ ಅವಧಿ ಒಟ್ಟು ಅವಧಿ 5 ಗಂಟೆ ಎರಡು ನಿಮಿಷ. ಈ ಗ್ರಹಣವು ವಿಶ್ವದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ ಈ ರೀತಿಯ ಚಂದ್ರಗ್ರಹಣದಲ್ಲಿ ಸೂತಕದ ಆಚರಣೆ ಮಾಡಲಾಗುವುದಿಲ್ಲ.

ಭಾರತದ ಈಶಾನ್ಯ ಭಾಗಗಳು(ಸಿಕ್ಕೀಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಅಂಡಮಾನ್-ನಿಕೋಬರ್ ದ್ವೀಪ ಹಾಗೂ ಒಡಿಸ್ಸಾದಲ್ಲಿ ಭಾಗಶ: ಚಂದ್ರಗ್ರಹಣ ಗೋಚರಿಸಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯ ಮಾಹಿತಿ ನೀಡಿದೆ.

ದಕ್ಷಿಣ ಅಮೇರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಉತ್ತರ ಅಮೇರಿಕಾ, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರ ದಲ್ಲಿ  ಪ್ರಮುಖವಾಗಿ ಗೋಚರಿಸಲಿದೆ.

ಭೂಮಿಯ ತುದಿಗಳಿಂದ ಮಾತ್ರ ಚಂದ್ರನಿಗೆ ಬೆಳಕು ಬೀಳುವ ಕಾರಣ ಚಂದ್ರ ಕೆಂಪಾಗಿ ಗೋಚರಿಸುತ್ತಾನೆ. ಪ್ರಪಂಚದ ಓಶನಿಯಾ ಪ್ರದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಸರಿಯಾಗಿ ಗೋಚರಿಸುತ್ತದೆ. ಈಶಾನ್ಯ ರಾಜ್ಯಗಳ ಕೆಲವೆಡೆಯಲ್ಲಿ ಅರೆ ನೆರಳಿನ ಚಂದ್ರಗ್ರಹಣ ಗೋಚರಿಸಬಹುದು.

ಗ್ರಹಣ ಕಾಣುವ ದೇಶಗಳಲ್ಲೂ ಕೂಡ 11 ನಿಮಿಷಗಳ ಕಾಲ ಮಾತ್ರ ಪೂರ್ಣಗ್ರಹಣ ಕಣ್ತುಂಬಿಕೊಳ್ಳಬಹುದು. ಬಾಹ್ಯಾಕಾಶದಲ್ಲಿ ನಡೆಯುವ ಈ ಬದಲಾವಣೆಯಿಂದ ಯಾರಿಗೂ ಅಪಾಯ ಇಲ್ಲ. ಸಮುದ್ರದ ಅಲೆ ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ.

ಮೇ 26ರಂದು ನಡೆಯುವ ಚಂದ್ರಗ್ರಹಣದ ನಂತರ ಮುಂದಿನ ಚಂದ್ರಗ್ರಹಣ ನವೆಂಬರ್ 19ರಂದು ನಡೆಯಲಿದೆ.

ಪ್ರವೇಶದ ರಾಶಿ

ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿ, ಅನುರಾಧಾ ನಕ್ಷತ್ರದಲ್ಲಿ ನಡೆಯಲಿದೆ. ಈ ರಾಶಿ, ನಕ್ಷತ್ರದ ಮೇಲೆ ಚಂದ್ರಗ್ರಹಣವು ಹೆಚ್ಚಿನ ಪರಿಣಾಮ ಬೀರಲಿದೆ. ಅನುರಾಧಾ ನಕ್ಷತ್ರದ ಅಧಿಪತಿ ಶನಿದೇವ. ಮೇ 23ರಂದು ಶನಿದೇವನೂ ವಕ್ರಿಯಾಗಿದ್ದಾನೆ. ಇವೆಲ್ಲವೂ ಈ ರಾಶಿ ನಕ್ಷತ್ರದ ಮೇಲೆ ಪರಿಣಾಮ ಬೀರುತ್ತದೆ.

ಚಂದ್ರನು ಮನಸ್ಸಿನ ಅಧಿಪತಿ. ಹಾಗಾಗಿ ಚಂದ್ರಗ್ರಹಣದ ಸಮಯದಲ್ಲಿ ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಕೆಲವರ ಮಾತು ಕಟುವಾಗಿರಬಹುದು. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಗ್ರಹಣದ ಅವಧಿಯಲ್ಲಿ ಚರ್ಚೆ ಹಾಗೂ ಜಗಳದಿಂದ ದೂರವಿರಿ. ಶೀತಲ ಆಹಾರವನ್ನು ಸೇವಿಸಬೇಡಿ ಮತ್ತು ಕೋಪವನ್ನು ನಿಯಂತ್ರಿಸಿ.

ಚಂದ್ರಗ್ರಹಣದಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನಕರ್ಮಾದಿಗಳನ್ನು ಮುಗಿಸಿ. ಚಂದ್ರನು ಶಿವನ ಹಣೆಯ ಮೇಲೆ ಕುಳಿತ ಚಿತ್ರಣವನ್ನು ಮನಸ್ಸಿನಲ್ಲಿ ತುಂಬಿಕೊಂಡು ಧ್ಯಾನ ಮಾಡಿ. ಗ್ರಹಣ ಸಮಯದಲ್ಲಿ ನೀವು ಅಗತ್ಯವಿರುವವರಿಗೆ ವಸ್ತುಗಳನ್ನು ದಾನ ಮಾಡಬಹುದು. ಗ್ರಹಣದ ಸಮಯದಲ್ಲಿ ಸಪ್ತಮುಖದ ರುದ್ರಾಕ್ಷಿಯನ್ನು ಗಂಗಾಜಲದೊಂದಿಗೆ ತಾಮ್ರದ ಪಾತ್ರೆಯಲ್ಲಿ ಇರಿಸಿ. ಚಂದ್ರಗ್ರಹಣ ಮುಗಿದ ನಂತರ ಸ್ನಾನ ಮಾಡಿ ಗಂಗಾಜಲವನ್ನು ಇಡೀ ಮನೆಗೆ ಚಿಮುಕಿಸಿ, ಶುದ್ಧಿ ಮಾಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English