ಮೇ 26ರ ಚಂದ್ರಗ್ರಹಣದ ಗೋಚರ ಮತ್ತು ಪರಿಣಾಮ

Tuesday, May 25th, 2021
Lunar Eclips

ಬೆಂಗಳೂರು  : ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣವು ಇದೇ ಬುಧವಾರ ಮೇ 26ರಂದು ನಡೆಯಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಚಂದ್ರಗ್ರಹಣ ಮೇ 26ರ ಮಧ್ಯಾಹ್ನ 2.17ಕ್ಕೆ ಪ್ರಾರಂಭವಾಗಲಿದ್ದು ಸಂಜೆ 7.19ಕ್ಕೆ ಕೊನೆಗೊಳ್ಳಲಿದೆ. ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಗ್ರಹಣ ಕಾಣಿಸಿಕೊಳ್ಳಲಿದ್ದು ಇದನ್ನು ಉಪಛಾಯಾ ಗ್ರಹಣವೆಂದಯ ಕರೆಯುತ್ತಾರೆ. ಗ್ರಹಣದ ಅವಧಿ ಒಟ್ಟು ಅವಧಿ 5 ಗಂಟೆ ಎರಡು ನಿಮಿಷ. ಈ ಗ್ರಹಣವು ವಿಶ್ವದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ […]

ಚಂದ್ರಗ್ರಹಣದಿಂದ ಮೈತ್ರಿ ಸರ್ಕಾರ ಕ್ಕೆ ಗಂಡಾಂತರ ; ಮುಖ್ಯಮಂತ್ರಿ ಆಪ್ತ ಜ್ಯೋತಿಷಿ ಭವಿಷ್ಯ

Monday, July 15th, 2019
Kumaraswamy

ಬೆಂಗಳೂರು:  ಜುಲೈ 17ರ ಚಂದ್ರಗ್ರಹಣ  ಮೈತ್ರಿ ಸರ್ಕಾರ ಕ್ಕೆ ಗಂಡಾಂತರ ತರಬಹುದು ಎಂದು ಮುಖ್ಯಮಂತ್ರಿ ಅವರ ಆಪ್ತ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಿದ್ದು, ಜು. 17ರಂದು ಚಂದ್ರಗ್ರಹಣವಾಗಲಿದೆ. ಅದೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೇಳಿ ಮೇಷರಾಶಿಯವರು. ಈ ರಾಶಿಯವರಿಗೆ ಗಂಡಾಂತರವಿದೆ ಎಂಬುದು ದೇವೇಗೌಡರ ಕುಟುಂಬಕ್ಕೆ ಆತಂಕ ತಂದಿದೆ. ಈ ನಡುವೆ ಜುಲೈ ತಿಂಗಳಲ್ಲಿಯೇ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡಿರುವುದು […]

ಪಿಲಿಕುಳದಲ್ಲಿ ಚಂದ್ರಗ್ರಹಣ ಹಾಗೂ ಗುರು ಮತ್ತು ಶನಿ ಗ್ರಹಗಳನ್ನು ಹತ್ತಿರದಿಂದ ವೀಕ್ಸಿಸಲು ಅವಕಾಶ

Monday, July 15th, 2019
Lunar eclipse

ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜುಲೈ 16 ರಂದು ರಾತ್ರಿ ಸಂಭವಿಸುವ ಚಂದ್ರ ಗ್ರಹಣ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಗುರು ಮತ್ತು ಶನಿ ಗ್ರಹಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಬಹುದು. ಈ ಸಮಯದಲ್ಲಿ ಗ್ರಹಣಗಳ ಬಗ್ಗೆ, ನಕ್ಷತ್ರ ಸಮೂಹಗಳ ಬಗ್ಗೆ ವಿವರಣೆ ನೀಡಲಾಗುವುದು. ಗ್ರಹಣವು ರಾತ್ರಿ 1.31 ಗಂಟೆಗೆ ಆರಂಭವಾಗಿ ಬೆಳಿಗ್ಗೆ 4.29 ಗಂಟೆಯ ವರೆಗೆ ಇರುವುದು. ಆಕಾಶ ವೀಕ್ಷಣಾ ಕಾರ್ಯಕ್ರಮವು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನಡೆಯಲಿದ್ದು ಸಾರ್ವಜನಿಕರು ಮತ್ತು […]

ಮಂಗಳೂರಿನಲ್ಲಿ ಖಗೋಳ ಶಾಸ್ತ್ರ ಸಂಘದ ಆಶ್ರಯದಲ್ಲಿ ಚಂದ್ರಗ್ರಹಣ ವೀಕ್ಷಣೆ

Thursday, February 1st, 2018
chandragrahan

ಮಂಗಳೂರು: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳೂರಿನ ಕುಲಶೇಖರದ ಶಾಲೆಯಲ್ಲಿ ಖಗೋಳ ಶಾಸ್ತ್ರ ಸಂಘದ ಆಶ್ರಯದಲ್ಲಿ ನೂರಾರು ಮಂದಿ ಆಸಕ್ತರಿಗೆ ಗ್ರಹಣ ವೀಕ್ಷಣೆ ಮಾಡಿಸಲಾಯಿತು. ಗ್ರಹಣದಿಂದಾಗಿ ಸಂಜೆ ವೇಳೆ ಮಂಗಳೂರಿನ ಬೀದಿ ಬಹುತೇಕ ನಿರ್ಜನವಾಗಿತ್ತು. ಅಂಗಡಿ, ಮುಂಗಟ್ಟುಗಳು ಕೆಲ ಮುಚ್ಚಿದ್ದರೆ, ತೆರೆದಿದ್ದ ಅಂಗಡಿ, ಹೋಟೆಲ್‌ಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಗ್ರಹಣ ಬಿಟ್ಟ ಬಳಿಕ ಮನೆಯಲ್ಲಿ ತೀರ್ಥ ಸಂಪೋಕ್ಷಣೆ ಮಾಡಿ ಬಳಿಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು. ಬಜಾಲ್ ನಂತೂರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ […]

ಚಂದ್ರಗ್ರಹಣ: ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಇಲ್ಲ

Tuesday, January 30th, 2018
dharmastala

ಉಡುಪಿ: ಖಗ್ರಾಸ ಚಂದ್ರ ಗ್ರಹಣ ನಿಮಿತ್ತ ಜ. 31ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಧ್ಯಾಹ್ನ 2.30 ಗಂಟೆಯಿಂದ ರಾತ್ರಿ 9ರ ವರೆಗೆ ಶ್ರೀ ಮಂಜುನಾಥ ದೇವರ ದರ್ಶನ ಹಾಗೂ ಪೂಜಾದಿ ಸೇವೆಗಳು ಇರುವುದಿಲ್ಲ. ರಾತ್ರಿ 9.30ರಿಂದ 10.30ರ ವರೆಗೆ ಭಕ್ತರಿಗೆ ಹೊರಾಂಗಣದಿಂದ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 31ರಂದು ಚಂದ್ರ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು […]

ಜ. 31: ತಾಮ್ರವರ್ಣದ ಸೂಪರ್‌ಮೂನ್‌ ಚಂದ್ರಗ್ರಹಣ

Monday, January 29th, 2018
moon

ಉಡುಪಿ:ನಡೆಯುವ ಚಂದ್ರಗ್ರಹಣ ವಿಶೇಷವಾದುದು. ಅದು ಕೇವಲ ಹುಣ್ಣಿಮೆಯಲ್ಲ, ಸೂಪರ್‌ಮೂನ್‌ ಹುಣ್ಣಿಮೆ. ಜತೆಗೆ ಖಗ್ರಾಸ ಗ್ರಹಣದೊಂದಿಗೆ ಚಂದ್ರೋದಯ ವಾಗಲಿದೆ. ಹೀಗಾಗುವುದು ಸುಮಾರು 150 ವರ್ಷಕ್ಕೊಮ್ಮೆ ಎನ್ನುತ್ತಾರೆ ಖಗೋಳ ಪರಿಣತರು. ವರ್ಷದಲ್ಲಿ ಎರಡು ಮೂರು ಹುಣ್ಣಿಮೆಗಳು ಸೂಪರ್‌ಮೂನ್‌ ಆಗುತ್ತವೆ. ಅಂದು ಚಂದ್ರ ಸಹಜಕ್ಕಿಂತ ಸುಮಾರು 14 ಪಟ್ಟು ದೊಡ್ಡದಾಗಿ ಕಂಡು 28 ಪಟ್ಟು ಹೆಚ್ಚು ಪ್ರಭೆಯಿಂದ ಕೂಡಿರುತ್ತಾನೆ. ಚಂದ್ರ ದೀರ್ಘ‌ವೃತ್ತದಲ್ಲಿ ಭೂಮಿಯನ್ನು ಪರಿ ಭ್ರಮಿಸುತ್ತಿರುವುದರಿಂದ 28 ದಿನಗಳಿಗೊಮ್ಮೆ ಸಮೀಪವಿರುತ್ತಾನೆ (ಪೆರಿಜಿ) ಹಾಗೂ ಇನ್ನೊಮ್ಮೆ ದೂರದಲ್ಲಿರುತ್ತಾನೆ (ಎಪೊಜಿ). ಭೂಮಿ ಹಾಗೂ ಚಂದ್ರನ […]