ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾರಾಟ

9:34 PM, Wednesday, May 26th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Mega Media logoಬೆಂಗಳೂರು : ಕಳೆದ ವರ್ಷದಂತೆ ಈ ವರ್ಷವೂ ಸಹ ಕೋವಿಡ್-19ನ ಲಾಕ್‍ಡೌನ್ ಸಮಯದಲ್ಲಿ ರೈತರ ಸಹಾಯಕ್ಕಾಗಿ ಜಿ.ಕೆ.ವಿ.ಕೆ. ಮುಖ್ಯದ್ವಾರದಲ್ಲಿರುವ ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ ಎಂದು ಕೃ.ವಿ.ವಿ. ಬೆಂಗಳೂರಿನ ವಿಸ್ತರಣಾ ನಿರ್ದೇಶಕರಾದ ಡಾ. ಎನ್. ದೇವಕುಮಾರ್‍ರವರು ತಿಳಿಸಿದರು.

ಅವರು ಇಂದು ಜಿಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾರಾಟ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಕೃಷಿ ವಿಶ್ವವಿದ್ಯಾನಿಲಯದ ಉಚಿತ ದೂರವಾಣಿ ಸಂಖ್ಯೆ 18004250571ಗೆ ಕರೆ ಮಾಡಿ ಕೃಷಿ ತಾಂತ್ರಿಕ ಮಾಹಿತಿ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿಪಡೆಯಬಹುದು. ಇದಲ್ಲದೆ ವಾಟ್ಸಾಪ್ ಸಂಖ್ಯೆ 9482477812ಗೆ ರೈತರುತಮ್ಮ ಬೆಳೆಗೆ ಬಿದ್ದಂತಹ ಕೀಟ, ರೋಗ ಮತ್ತು ಕೃಷಿ ಸಮಸ್ಯೆಯ ಪೋಟೋ ಕಳುಹಿಸಿದರೆ ವಿಜ್ಞಾನಿಗಳು ಸೂಕ್ತ ಪರಿಹಾರವನ್ನು ತಿಳಿಸುತ್ತಾರೆ. ಈ ಪ್ರಯೋಜನವನ್ನು ರೈತರು ತಮ್ಮ ಗ್ರಾಮಗಳಲ್ಲಿಯೇ ಇದ್ದು ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅಲ್ಲದೇ, ಕೃ.ವಿ.ವಿ. ಬೆಂಗಳೂರು ಹೊರತಂದಿರುವ “ಕೃಷಿ ಬೆಳೆಗಳ ಆಧುನಿಕ ಬೇಸಾಯ ಪದ್ದತಿಗಳು” ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಾಗಲಕೋಟೆ ಹೊರತಂದಿರುವ “ಸಮಗ್ರತೋಟಗಾರಿಕೆಕೈಪಿಡಿ” ಪುಸ್ತಕದ ಪಿ.ಡಿ.ಎಫ್. ಪ್ರತಿಯನ್ನು ವಾಟ್ಸಾಪ್ ಮೂಲಕ ಮೊಬೈಲ್ ಸಂಖ್ಯೆ 9591347043 / 9972035456ಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿದವರಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಬರುವದಕ್ಷಿಣಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ (ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ತುಮಕೂರು) ಸಮನ್ವಯ ಸಮಿತಿಯನ್ನು ಸಹ ರಚಿಸಲಾಗಿದೆ. ಇದರಲ್ಲಿ ವಿಜ್ಞಾನಿಗಳ ತಂಡವಿರುತ್ತದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ “ಅಗ್ರಿವಾರ್‍ಘಟಕದಿಂದ” ಶ್ರೀನಾಥ್, ಪ್ರಗತಿಪರರೈತರು, ತೊಪಲ್ಲಿ, ಶ್ರೀನಿವಾಸಪುರ ತಾಲ್ಲೂಕುರವರು ತಮ್ಮ ಮಾವಿನ ಹಣ್ಣನ್ನು ಹೆಬ್ಬಾಳ, ಜಕ್ಕೂರು, ಸಹಕಾರನಗರ, ಮತ್ತಿತರೆ ಬಡಾವಣೆಗಳಲ್ಲಿ ಕೆ.ಜಿ.ಗೆ 80 ರೂ ಗಳಂತೆ ಮೂರು ಕೆ.ಜಿ. ಬಾಕ್ಸ್ ಗಳನ್ನು ಮಾರಾಟ ಮಾಡಿದರು. ಸುಮಾರು 3 ಟನ್ ಬಾದಾಮಿ ಮಾವಿನ ತಳಿಯನ್ನು ಮಾರಾಟ ಮಾಡಿದರು.

ಪ್ರಗತಿಪರ ರೈತ ಶ್ರೀನಾಥ್ ರವರು ಕೃ.ವಿ.ವಿ. ಬೆಂಗಳೂರಿನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ತಮ್ಮ ಮಾವನ್ನು ನೈಸರ್ಗಿಕವಾಗಿ ಹಣ್ಣು ಮಾಡಲಾಗಿದೆ. ಯಾವುದೇ ರಾಸಾಯನಿಕವನ್ನು ಬಳಸಲಾಗಿರುವುದಿಲ್ಲ ಇದರಿಂದ ಗ್ರಾಹಕರಿಗೆ ತಾಜಾ, ರಾಸಾಯನಿಕ ಮುಕ್ತ, ಉತ್ತಮ ಗುಣಮಟ್ಟದ ಮಾವು ಸಿಗುತ್ತದೆ. ಮಧ್ಯವರ್ತಿಗಳು ಇಲ್ಲದಿರುವುದರಿಂದ ರೈತರಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಬಿ. ಕೃಷ್ಣಮೂರ್ತಿ, ಡಾ. ಕೆ. ಬಿ. ಉಮೇಶ್, ಡಾ. ಎಸ್. ಸಿದ್ದಯ್ಯ, ಡಾ.ಸಿ. ವಿ. ವೆಂಕಟೇಶ್‍ಮೂರ್ತಿ, ಡಾ. ನಾರಾಯಣರೆಡ್ಡಿ ಮತ್ತಿತರಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English