ಮಾವು ಹೊತ್ತ ಕಿಸಾನ್ ರೈಲಿಗೆ ಹಸಿರು ನಿಶಾನೆ

Tuesday, June 29th, 2021
Mango-Train

ಬೆಂಗಳೂರು  : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕಂದಾಯ ಸಚಿವ ಆರ್ ಅಶೋಕ ಅವರು ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಯಲಹಂಕ ರೈಲ್ವೆ ನಿಲ್ದಾಣದಿಂದ ನವದೆಹಲಿಗೆ ಕಿಸಾನ್ ರೈಲು ಪಯಣ ಶುರು ಮಾಡಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, “ರೈತರು ದೂರದ ಸ್ಥಳಗಳಲ್ಲಿರುವ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ ಮತ್ತು ಅವರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಒದಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಕಿಸಾನ್ […]

ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾರಾಟ

Wednesday, May 26th, 2021
Mega Media logo

ಬೆಂಗಳೂರು : ಕಳೆದ ವರ್ಷದಂತೆ ಈ ವರ್ಷವೂ ಸಹ ಕೋವಿಡ್-19ನ ಲಾಕ್‍ಡೌನ್ ಸಮಯದಲ್ಲಿ ರೈತರ ಸಹಾಯಕ್ಕಾಗಿ ಜಿ.ಕೆ.ವಿ.ಕೆ. ಮುಖ್ಯದ್ವಾರದಲ್ಲಿರುವ ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ ಎಂದು ಕೃ.ವಿ.ವಿ. ಬೆಂಗಳೂರಿನ ವಿಸ್ತರಣಾ ನಿರ್ದೇಶಕರಾದ ಡಾ. ಎನ್. ದೇವಕುಮಾರ್‍ರವರು ತಿಳಿಸಿದರು. ಅವರು ಇಂದು ಜಿಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾರಾಟ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಕೃಷಿ ವಿಶ್ವವಿದ್ಯಾನಿಲಯದ ಉಚಿತ ದೂರವಾಣಿ ಸಂಖ್ಯೆ 18004250571ಗೆ ಕರೆ ಮಾಡಿ ಕೃಷಿ ತಾಂತ್ರಿಕ ಮಾಹಿತಿ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿಪಡೆಯಬಹುದು. […]