ಮಾವು ಹೊತ್ತ ಕಿಸಾನ್ ರೈಲಿಗೆ ಹಸಿರು ನಿಶಾನೆ

7:51 PM, Tuesday, June 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Mango-Trainಬೆಂಗಳೂರು  : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕಂದಾಯ ಸಚಿವ ಆರ್ ಅಶೋಕ ಅವರು ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಯಲಹಂಕ ರೈಲ್ವೆ ನಿಲ್ದಾಣದಿಂದ ನವದೆಹಲಿಗೆ ಕಿಸಾನ್ ರೈಲು ಪಯಣ ಶುರು ಮಾಡಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, “ರೈತರು ದೂರದ ಸ್ಥಳಗಳಲ್ಲಿರುವ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ ಮತ್ತು ಅವರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಒದಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಿಸಾನ್ ರೈಲು ಯೋಜನೆಯನ್ನು ಪ್ರಾರಂಭಿಸುವಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಕಾರ್ಯವನ್ನು ಶ್ಲಾಘಿಸಿದ ಸಿಎಂ “ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೈತರು ತಾವು ಬೆಳೆದ ಬೆಳೆಗಳನ್ನು ದೆಹಲಿಯವರೆಗೆ ಸಾಗಾಣಿಕೆ ಮಾಡುವ ಮೂಲಕ ಬೆಳೆಗೆ ಹೆಚ್ಚು ಬೆಲೆ ಸಿಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಪೇಕ್ಷೆಯನ್ನು ಇಂದು ಪೂರೈಸುತ್ತಿದ್ದೇವೆ. ನಮ್ಮ ರಾಜ್ಯದ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು”, ಎಂದು ತಿಳಿಸಿದರು.

Mango-Trainಕಿಸಾನ್ ರೈಲು ಆಗಸ್ಟ್ 2020 ರಲ್ಲಿ ಪ್ರಾರಂಭವಾಗಿದ್ದು, ಇದು ರೈತರಿಗೆ, ಕೃಷಿ ಉತ್ಪನ್ನಗಳನ್ನು ಒಟ್ಟುಗೂಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಕಿಸಾನ್ ರೈಲಿಗೆ ಸರಕು ಶುಲ್ಕದಲ್ಲಿ ಶೇ.50% ಮುಂಗಡ ಸಹಾಯಧನವನ್ನು ಒದಗಿಸಲಾಗಿದೆ. ಇದು ರೈತರು ತಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ.

ಈ ರೈಲು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಲಿಸುತ್ತದೆ. ಇದರಿಂದಾಗಿ ರೈತರಿಗೆ ತಾವು ಬೆಳೆದ ಉತ್ಪನ್ನಗಳನ್ನು ತರಲು ಸರಿಯಾದ ಸಮಯ ನಿಗದಿಯಾಗುತ್ತದೆ. ಇದರಿಂದ ಯಾವುದೇ ವಿಳಂಬ ಆಗುವುದಿಲ್ಲ ಉತ್ಪನ್ನಗಳು ಸಹ ತಾಜವಾಗಿ ಇರುತ್ತವೆ. ಈ ನಿರ್ದಿಷ್ಟ ಕಿಸಾನ್ ರೈಲು ಕೋಲಾರದ ಚಿಂತಾಮಣಿಯಿಂದ ೩೮-೪೮ ಗಂಟೆಗಳಲ್ಲಿ ದೆಹಲಿಗೆ (2300 ಕಿ.ಮೀ ದೂರ) ತಲುಪಲಿದೆ.

ಉಚಿತ ಲಸಿಕೆ ಅಭಿಯಾನ
ಇದರ ಮಧ್ಯೆ ಕಂದಾಯ ಸಚಿವ ಆರ್ ಅಶೋಕ ಅವರು ಪದ್ಮನಾಭನಗರ ಕ್ಷೇತ್ರದ ಕದಿರೇನಹಳ್ಳಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English