ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಚಾಲನೆ

5:26 PM, Saturday, December 22nd, 2012
Share
1 Star2 Stars3 Stars4 Stars5 Stars
(No Ratings Yet)
Loading...

Pilikula Nisargadhamaಮಂಗಳೂರು :ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಶುಕ್ರವಾರ ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ವಾಟರ್ ಝೋರ್ಬ್ ಬಾಲ್ ಪಿಲಿಕುಳ ನಿಸರ್ಗಧಾಮ ಮತ್ತು ಫನ್ 360 ಸಂಸ್ಥೆಯ ಜಂಟಿ ಯೋಜನೆಯಾಗಿದ್ದು, ಇದು ಈಗಾಗಲೇ ಪಾಶ್ಚಾತ್ಯ ಹಾಗು ಮುಂದುವರಿದ ರಾಷ್ಟ್ರಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಯಾಗಿದೆ. ಇದು ಹೆಚ್ಚು ಮೋಜು ಮತ್ತು ಸಂತೋಷವನ್ನು ನೀಡುವ ಕ್ರೀಡೆಯಾಗಿದ್ದು ದಕ್ಷಿಣ ಕನ್ನಡ ಜನರ ಅದರಲ್ಲೂ ಪ್ರಮುಖವಾಗಿ ಮಕ್ಕಳ ಆನಂದ ನಿರೀಕ್ಷಿಸಲಾಗಿದೆ.

ಈ ಕ್ರೀಡೆಯಲ್ಲಿ ಏಳು ಅಡಿ ಎತ್ತರದ ಥರ್ಮೋಪ್ಲಾಸ್ಟ್ ಬಾಲ್ ಅನ್ನು ನೀರಿನಲ್ಲಿ ತೇಲಿ ಬಿಡಲಾಗುತ್ತದೆ. ಉತ್ಸಾಹಿ ಜನರಿಗೆ ಈ ಬಾಲಿನೊಳಗೆ ಓಡಾಡಿ ಆಟವಾಡಲು ಅವಕಾಶವಿದ್ದು, ವಿಭಿನ್ನ ರೀತಿಯ ಅನುಭವವನ್ನು ನೀಡುತ್ತದೆ. ಈ ಝೋರ್ಬ್ ಬಾಲ್ ನಲ್ಲಿ ಆಟವಾಡುವುದರಿಂದ ದೇಹಕ್ಕೆ ವ್ಯಾಯಾಮ ಲಭಿಸುವುದರ ಜತೆಗೆ ಅನಗತ್ಯ ಬೊಜ್ಜು ನಾಶವಾಗುತ್ತದೆ.

ಈ ಸಂದರ್ಭದಲ್ಲಿ ಪಿಲಿಕುಳ ನಿಸರ್ಗಧಾಮದ ಮ್ಯಾನೇಜರ್ ಭಾಸ್ಕರ್, ಇ.ಫೆರ್ನಾಂಡಿಸ್, ಸಂಪತ್ ಉಡುಪ, ಹಾಗೂ ನಂದನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English