ಕೊರೊನಾ ಪಾಸಿಟಿವ್ ಇದ್ದ ಯುವಕ ಕಟ್ಟಡದಿಂದ ಹಾರಿ ಆತ್ಮಹತ್ಯೆ

4:27 PM, Saturday, May 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Jumpingಮಂಗಳೂರು : ಕೊರೊನಾ ಪಾಸಿಟಿವ್ ಇದ್ದ ಯುವಕನೋರ್ವ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪಡೀಲ್ ಬಳಿ ಮೇ 27 ರ ಗುರುವಾರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಸಮೀರ್ (30)ಎಂದು ಗುರುತಿಸಲಾಗಿದೆ. ಪಡೀಲ್ ನ 7 ನೇ ಮಹಡಿಯ ಫ್ಲ್ಯಾಟ್ ನಿಂದ ಸಮೀರ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಸಮೀರ್ ಅವಿವಾಹಿತರಾಗಿದ್ದು, ಮೃತದೇಹ ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ.

ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English