ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ ವರೆಗೂ ಉಚಿತ ಶಿಕ್ಷಣ : ಶ್ರೀ ಸಿದ್ಧರಾಮ ಸ್ವಾಮೀಜಿ

5:04 PM, Sunday, May 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

Siddarama Swamyಗದಗ: ಹೆಮ್ಮಾರಿ ಕೊರೊನಾ ಸಾಕಷ್ಟು ಮಕ್ಕಳನ್ನು ತಬ್ಬಲಿಯಾಗಿ ಮಾಡಿದೆ. ಹೆತ್ತವರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಸದ್ಯ ಇಂತಹ ಮಕ್ಕಳ ಶಿಕ್ಷಣಕ್ಕೆ ಮುಂದಾದ ಗದಗದ ತೋಂಟದಾರ್ಯ ಮಠದ ಸ್ವಾಮೀಜಿ. ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಆ ಮೂಲಕ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹಕ್ಕೂ ಶ್ರೀಮಠ ಮುಂದಾಗಿದೆ.

ಎಲ್ ಕೆಜಿಯಿಂದ ಇಂಜಿನೀಯರಿಂಗ್ ವರೆಗೂ ಉಚಿತ ಶಿಕ್ಷಣ ನೀಡುವುದಾಗಿ ತೋಂಟದಾರ್ಯ ಮಠದ ಶ್ರೀಗಳು ಹೇಳಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಮಠವಾದ ಗದಗದ ತೋಂಟದಾರ್ಯ ಮಠ ಸಂದಿಗ್ಧ ಪರಿಸ್ಥಿತಿಯಲ್ಲಿ ಟೊಂಕ ಕಟ್ಟಿ ನಿಂತು ಸಹಾಯ ಮಾಡುತ್ತಿದೆ.

ಕಳೆದ ಬಾರಿ ಕೊರೊನಾ ಒಂದನೇಯ ಅಲೆಯಲ್ಲಿ ಆಹಾರ ನೀಡಿ ಮಾನವೀಯತೆ ಮೆರೆದಿತ್ತು. ಈ ಬಾರಿಯೂ ಬಡವರು, ನಿರ್ಗತಿಕರು, ಕಾರ್ಮಿಕರು ಸೇರಿದಂತೆ ನಿತ್ಯ ದುಡಿದು ಬಂದ ಹಣದಿಂದ ಜೀವನ ನಡೆಸುವ ಜನರ ಹಸಿವು ನೀಗಿಸುವ ಕೆಲಸಕ್ಕೆ ಶ್ರೀ ಮಠ ಮುಂದಾಗಿದೆ.

ಶ್ರೀಮಠದ ವಸತಿನಿಲಯಲ್ಲಿ ಇದ್ದು ಕಲಿಯುವಂತರಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೂ ಶ್ರೀಮಠ ಸಾಥ್ ನೀಡಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಠದ ಕಾಲೇಜನ್ನು ಕೊವಿಡ್ ಕೇರ್ ಸೆಂಟರ್ ಮಾಡಲು ಅನುಮತಿ ನೀಡಿದ್ದಾರೆ.

ವರದಿ :ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English