ಕರೊನಾ ಸೋಂಕಿಗೆ ಒಳಗಾಗಿದ್ದ ಭುವನಗಿರಿ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Tuesday, June 8th, 2021
siddalinga Shivacharya

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಕವಲೆದುರ್ಗದ ಮಹಾಮಹತ್ತಿನ ಭುವನಗಿರಿ ಸಂಸ್ಥಾನಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ  ಲಿಂಗೈಕ್ಯರಾದರು. ಕರೊನಾ ಸೋಂಕಿತರಾಗಿದ್ದ ಸ್ವಾಮೀಜಿಯವರನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಹಿಂದೆ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಲಿಂಗೈಕ್ಯರಾದರು. ಕವಲೆದುರ್ಗ ಶ್ರೀಗಳು ಐದು ಪಿಎಚ್ಡಿ ಪದವಿ ಪಡೆದಿದ್ದರು. ಮಠದ ಎಲ್ಲ ಕೆಲಸವನ್ನು ತಾವೇ ಮಾಡುತ್ತಿದ್ದರು  ಮಠದಲ್ಲಿ ಯಾವುದೇ ಸೇವಕ ರಿರಲಿಲ್ಲ . ಅಲ್ಲದೆ ಮಠಕ್ಕೆ ಆಗಮಿಸುವ […]

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ ವರೆಗೂ ಉಚಿತ ಶಿಕ್ಷಣ : ಶ್ರೀ ಸಿದ್ಧರಾಮ ಸ್ವಾಮೀಜಿ

Sunday, May 30th, 2021
Siddarama Swamy

ಗದಗ: ಹೆಮ್ಮಾರಿ ಕೊರೊನಾ ಸಾಕಷ್ಟು ಮಕ್ಕಳನ್ನು ತಬ್ಬಲಿಯಾಗಿ ಮಾಡಿದೆ. ಹೆತ್ತವರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಸದ್ಯ ಇಂತಹ ಮಕ್ಕಳ ಶಿಕ್ಷಣಕ್ಕೆ ಮುಂದಾದ ಗದಗದ ತೋಂಟದಾರ್ಯ ಮಠದ ಸ್ವಾಮೀಜಿ. ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಆ ಮೂಲಕ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹಕ್ಕೂ ಶ್ರೀಮಠ ಮುಂದಾಗಿದೆ. ಎಲ್ ಕೆಜಿಯಿಂದ ಇಂಜಿನೀಯರಿಂಗ್ ವರೆಗೂ ಉಚಿತ ಶಿಕ್ಷಣ ನೀಡುವುದಾಗಿ ತೋಂಟದಾರ್ಯ ಮಠದ ಶ್ರೀಗಳು ಹೇಳಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಮಠವಾದ ಗದಗದ ತೋಂಟದಾರ್ಯ ಮಠ ಸಂದಿಗ್ಧ ಪರಿಸ್ಥಿತಿಯಲ್ಲಿ ಟೊಂಕ […]

ಬೃಂದಾವನಸ್ಥರಾದ ಎಡನೀರು ಶ್ರೀಕೇಶವಾನಂದ ಭಾರತೀ ಸ್ವಾಮೀಜಿ

Monday, September 7th, 2020
edaneeru Swamiji

ಕಾಸರಗೋಡು : ಎಡನೀರಿನ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಬೃಂದಾವನಸ್ಥರಾಗಿದ್ದಾರೆ. ಕಾಸರಗೋಡಿನ ಎಡನೀರಿನಲ್ಲಿ ಕೇಶವಾನಂದ ಭಾರತೀ ಶ್ರೀಗಳ ಅಂತ್ಯದ ವಿಧಿವಿಧಾನಗಳು ನಡೆದವು. ಮಠದ ಉತ್ತರ ಭಾಗದಲ್ಲಿರುವ ಬೃಂದಾವನದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಯಿತು. ಮಠದ ಈ ಹಿಂದಿನ ಯತಿವರೇಣ್ಯರ ಸಮಾಧಿಗಳ ಪಕ್ಕದಲ್ಲಿ ಶ್ರೀಗಳ ಸಮಾಧಿ ಮಾಡಲಾಯಿತು. ವೇದ ವಿದ್ವಜ್ಜನರು, ತಂತ್ರಿಗಳು ಮತ್ತು ಧಾರ್ಮಿಕ ಪಂಡಿತರು ನೇತೃತ್ವವಹಿಸಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಆಯ್ದ ಭಕ್ತರು ಮತ್ತು ಮಠದ ಆಡಳಿತ ಮಂಡಳಿಯವರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ […]

ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯ

Sunday, September 6th, 2020
keshavananda Bharati

ಕಾಸರಗೋಡು: ಎಡನೀರು ಮಠಾಧೀಶ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ  ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು (79) ರಾತ್ರಿ 12.45ರ ಸುಮಾರಿಗೆ ಕೃಷ್ಣೈಕ್ಯರಾದರು.. ಸೆ.2ರಂದು ಚಾತುರ್ಮಾಸ್ಯವನ್ನು ಪೂರೈಸಿದ್ದ ಶ್ರೀಗಳು ಕಳೆದ ಕೆಲವು ದಿನಗಳಿಂದ ಅಲ್ಪ ಅಸೌಖ್ಯದಲ್ಲಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ ಫಲಾಹಾರ ಸ್ವೀಕರಿಸಿದ್ದ ಶ್ರೀಗಳು ಮಧ್ಯರಾತ್ರಿಯ ವೇಳೆ ಅಸ್ತಂಗತರಾಗಿದ್ದಾರೆ. 1960, ನ.14ರಿಂದ ಎಡನೀರು ಮಠಾಧಿಶರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ  ಅಪಾರ […]

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕೊವೀಡ್ -19 ಸೋಂಕು ದೃಢ

Tuesday, July 21st, 2020
Sugunendra Thirtha swamy

ಉಡುಪಿ :  ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ  ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಸೋಮವಾರ ರಾತ್ರಿ  ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದೆ. ಸ್ವಾಮೀಜಿಗಳು ಇಂದಿನಿಂದ ಪಾಡಿಗಾರು ಮಠದಲ್ಲಿ ಚಾರ್ತುಮಾಸ […]

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ

Friday, January 10th, 2020
pejavara

ಉಡುಪಿ : ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ಗುರುವಾರ ನಡೆಯಿತು. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪೇಜಾವರ ಶ್ರೀಗಳ ಭಾವಚಿತ್ರದ ಎದುರು ದೀಪ ಬೆಳಗಿಸಿ ನುಡಿನಮನ ಸಲ್ಲಿಸಿದರು. ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪೇಜಾವರ ಮಠ, ತಲಪಾಡಿಯ ಕಣ್ವತೀರ್ಥ ಮಠ, ಪೇಜಾವರ ಮೂಲಮಠ, ಪೆರ್ಣಂಕಿಲ ದೇವಸ್ಥಾನ, ಮುಚ್ಚಲ ಕೋಡು ದೇವಸ್ಥಾನ, ವಿದ್ಯೋದಯ ಸಮೂಹ ಸಂಸ್ಥೆ, ಪಾಜಕದ ಆನಂದ ತೀರ್ಥ ವಿದ್ಯಾಲಯ, ರಾಮಕುಂಜದ ವಿದ್ಯಾಸಂಸ್ಥೆಗಳಲ್ಲಿ […]