ಕರೊನಾ ಸೋಂಕಿಗೆ ಒಳಗಾಗಿದ್ದ ಭುವನಗಿರಿ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

8:07 PM, Tuesday, June 8th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

siddalinga Shivacharyaಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಕವಲೆದುರ್ಗದ ಮಹಾಮಹತ್ತಿನ ಭುವನಗಿರಿ ಸಂಸ್ಥಾನಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ  ಲಿಂಗೈಕ್ಯರಾದರು.

ಕರೊನಾ ಸೋಂಕಿತರಾಗಿದ್ದ ಸ್ವಾಮೀಜಿಯವರನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಹಿಂದೆ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಲಿಂಗೈಕ್ಯರಾದರು.

ಕವಲೆದುರ್ಗ ಶ್ರೀಗಳು ಐದು ಪಿಎಚ್ಡಿ ಪದವಿ ಪಡೆದಿದ್ದರು. ಮಠದ ಎಲ್ಲ ಕೆಲಸವನ್ನು ತಾವೇ ಮಾಡುತ್ತಿದ್ದರು  ಮಠದಲ್ಲಿ ಯಾವುದೇ ಸೇವಕ ರಿರಲಿಲ್ಲ . ಅಲ್ಲದೆ ಮಠಕ್ಕೆ ಆಗಮಿಸುವ ಭಕ್ತರಿಗೆ ತಾವೇ ಅಡುಗೆ ಮಾಡಿ ದಾಸೋಹ ಮಾಡುತ್ತಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English