ಕೊರೋನಾ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ನದಿಗೆ ಎಸೆಯುವ ವಿಡಿಯೋ ವೈರಲ್

5:49 PM, Sunday, May 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

Prem Nath Misra ಸಿದ್ಧಾರ್ಥ್ ನಗರ : ಸೇತುವೆಯೊಂದರಿಂದ ನದಿಗೆ ಕೊರೋನಾ ವೈರಸ್ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ಎಸೆಯುವ ವಿಡಿಯೋ ಈಗ ಬಾರಿ ವೈರಲ್ ಆಗಿದೆ.

ಒಬ್ಬರು ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಸೇರಿ  ಉತ್ತರಪ್ರದೇಶದ ಬಲರಾಂಪುರ್ ಜಿಲ್ಲೆಯ ರಾಪ್ತಿ ನದಿಗೆ ಮೇ 30 ಭಾನುವಾರ ಮೃತ ದೇಹ ಎಸೆಯುವುದನ್ನು ಕಾರಿನಲ್ಲಿ ಹೋಗುತ್ತಿದ್ದವರು ಚಿತ್ರೀಕರಿಸಿದ್ದರು.

ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ವಿವರ ಸಂಗ್ರಹಿಸಿ ಕೇಸು ದಾಖಲಿಸಿದ್ದಾರೆ.

ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಸೊಹರತ್‌ ನಿವಾಸಿ ಪ್ರೇಮ್ ನಾಥ್ ಮಿಶ್ರಾ ಅವರ ಮೃತದೇಹವನ್ನು ನದಿಗೆ ಎಸೆಯಲಾಗಿದೆ ಎಂದು ಬಲರಾಂಪುರ ಮುಖ್ಯ ವೈದ್ಯಾಧಿಕಾರಿ ವಿಜಯ್ ಬಹದ್ದೂರ್ ಸಿಂಗ್ ಭಾನುವಾರ ತಿಳಿಸಿದ್ದಾರೆ.

“ಪ್ರೇಮ್ ನಾಥ್ ಮಿಶ್ರಾ ಅವರು ಮೇ 25 ರಂದು ಕೋವಿಡ್ -19 ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಮೇ 28 ರಂದು ರೋಗಕ್ಕೆ ಬಲಿಯಾದರು. ಕೋವಿಡ್ -19 ಪ್ರೋಟೋಕಾಲ್ ಪ್ರಕಾರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸ ಲಾಗಿತ್ತು.

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ದೇಹವನ್ನು ರಾಪ್ತಿ ನದಿಗೆ ಎಸೆಯಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಇದೆ ತಿಂಗಳ ಆರಂಭದಲ್ಲಿ, ರಾಜ್ಯದ ಗಂಗಾ ಮತ್ತು ಯಮುನಾ ನದಿಗಳಲ್ಲಿ ಹಲವಾರು ಶವಗಳು ತೇಲುತ್ತಿರುವಂತೆ ಕಂಡುಬಂದವು, ಇವು ಕೋವಿಡ್ -19 ರೋಗಿಗಳದ್ದೇ ಎಂಬ ಆತಂಕ ಜನರಲ್ಲಿ ಹುಟ್ಟಿಸಿದೆ.

ಅಲ್ಲಿನ ಅಧಿಕಾರಿಗಳು ಕೂಡ ಜನರನ್ನು ನದಿಗಳಲ್ಲಿ ವಿಲೇವಾರಿ ಮಾಡದಂತೆ ಜನರನ್ನು ಒತ್ತಾಯಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English