ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಕಣ್ಣು, ಹೃದಯ ಇಲ್ಲ : ಡಿಕೆಶಿ ಕಿಡಿ

2:50 PM, Monday, May 31st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

DK shivakumar ಧಾರವಾಡ : ರಾಜ್ಯ ಬಿಜೆಪಿ ಸರ್ಕಾರ ನೀಡಿದ ಪರಿಹಾರ ಇಲ್ಲಿಯವರೆಗೂ ರೈತರಿಗೆ ಸಿಕ್ಕೇಯಿಲ್ಲ, ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡೂ ಗಂಟೆ ಅವಕಾಶ ನೀಡುವ ಈ ಸರ್ಕಾರ, ಆದರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡಿದೆ. ಈ ಸರ್ಕಾರಕ್ಕೆ ನಿಮಗೆ ಕಣ್ಣು, ಹೃದಯ ಎಂಬುದು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಿಡಿ ಕಾರಿದರು .

ತಾಲೂಕಿನ ರಾಯಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಂತೂ ಸದಾ ರೈತರ ಜೊತೆ ನಿಲ್ಲುತ್ತೇವೆ , ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಕೊಡಿ, ನಿಮ್ಮ ಅಧಿಕಾರ ಏನೂ ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲವು ಸಚಿವರಗಳನ್ನು ಜಿಲ್ಲೆಗೆ ಕಳುಹಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಲಾಕ್ ಡೌನ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ , ಲಾಕ್‍ಡೌನ್ ವಿಸ್ತರಣೆ ಬಗ್ಗೆ ನಾನೇನು ಹೇಳಲಾರೆ, ನಾನು ಜನರ ಬಳಿ ಬಂದಿದ್ದೇನೆ. ಹಾಗಾಗಿ ಜನರ ಕುರಿತು ಮಾತನಾಡುತ್ತೇನೆ, ಲಾಕ್‍ಡೌನ್ ಗೆ ಸಂಬಂಧಿಸಿದಂತೆ ಅದು ಸರ್ಕಾರದ ನಿರ್ಧಾರ,ಅವರೇನಾದ್ರು ಮಾಡಿಕೊಳ್ಳಲಿ ನನಗೆ ಸರ್ಕಾರ ಕೇಳಿದ್ರೆ ನನ್ನ ಅಭಿಪ್ರಾಯ ಹೇಳುವೇನು. ಆವಾಗ ಮಾತ್ರ ಉತ್ತರ ಕೊಡುತ್ತೇನೆಂದು ಮಾರ್ಮಿಕವಾಗಿ ನುಡಿದರು.

ಹೊಲದಲ್ಲಿ ಕುಳಿತು ರೈತರ ಸಮಸ್ಯೆ ಆಲಿಕೆ : ಇದಕ್ಕೂ ಮುನ್ನ ರಾಯಪುರ ಬಳಿ ಹೊಲದಲ್ಲಿ ರೈತರೊಂದಿಗೆ ಕುಳಿತು ಅವರ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ಆಲಿಸಿದ ಡಿಕೆ ಶಿವಕುಮಾರ ,ನಮ್ಮ ಕಾಂಗ್ರೆಸ್ ಪಕ್ಷ ಸದಾ ನಿಮ್ಮೊಂದಿಗಿರುತ್ತದೆ, ನಿಮ್ಮ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ನಿಮ್ಮೊಂದಿಗೆ ಹೋರಾಟ ಮಾಡುತ್ತೇವೆ ಎಂಬ ಅಭಯ ನೀಡಿದರು.

ಕೊರೋನಾ ಕಾರಣದಿಂದ ನಾವು ಬೆಳೆದ ಬೆಳೆಗಳು ಮಾರಾಟ ಮಾಡಲು ಆಗುತ್ತಿಲ್ಲ ,ನಾವು ಬೆಳೆದ ತರಕಾರಿ ಮಾರಾಟ ಮಾಡಲು ಪೆÇಲೀಸರು ಬಿಡುತ್ತಿಲ್ಲ , ನಲವತ್ತು ರೂಪಾಯಿ ಇದ್ದ ಬೆಲೆ ಈಗ ಒಂದು ರೂಪಾಯಿ ಸಹ ಕೇಳುತ್ತಿಲ್ಲ, ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಆಗುತ್ತಿಲ್ಲ, ರಸಗೊಬ್ಬರ ಸಹ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡರಲ್ಲದೇ , ಮೆಣಸಿನಕಾಯಿ, ಟೊಮೋಟೋ, ಗಜ್ಜರಿ, ಬಿಟ್ರೂಟ್ ಕಿತ್ತು ತಂದು ಶಿವಕುಮಾರ ಅವರೇದುರು ಪ್ರದರ್ಶಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಪಾರಸ್ಮಲ್ ಜೈನ್, ಡಾ. ಶರಣಪ್ಪ ಕೊಟಗಿ, ಅಲ್ತಾಫ ಹಳ್ಳೂರ,ರಾಬರ್ಟ್ ದದ್ದಾಪುರಿ, ರಜತ್ ಉಳ್ಳಾಗಡ್ಡಮಠ ಸೇರಿದಂತೆ ಹು-ಧಾ ಅವಳಿನಗರದ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English