ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಕಣ್ಣು, ಹೃದಯ ಇಲ್ಲ : ಡಿಕೆಶಿ ಕಿಡಿ

Monday, May 31st, 2021
DK shivakumar

ಧಾರವಾಡ : ರಾಜ್ಯ ಬಿಜೆಪಿ ಸರ್ಕಾರ ನೀಡಿದ ಪರಿಹಾರ ಇಲ್ಲಿಯವರೆಗೂ ರೈತರಿಗೆ ಸಿಕ್ಕೇಯಿಲ್ಲ, ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡೂ ಗಂಟೆ ಅವಕಾಶ ನೀಡುವ ಈ ಸರ್ಕಾರ, ಆದರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡಿದೆ. ಈ ಸರ್ಕಾರಕ್ಕೆ ನಿಮಗೆ ಕಣ್ಣು, ಹೃದಯ ಎಂಬುದು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಿಡಿ ಕಾರಿದರು . ತಾಲೂಕಿನ ರಾಯಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಂತೂ ಸದಾ ರೈತರ ಜೊತೆ ನಿಲ್ಲುತ್ತೇವೆ […]

ಧಾರವಾಡ: ಜಿಲ್ಲೆಯಲ್ಲಿ ಮದ್ಯ ಮಾರಾಟ, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಗ್ರೀನ್ ಸಿಗ್ನಲ್

Sunday, May 30th, 2021
Nithish Pateel

ಧಾರವಾಡ: ಕೊರೊನಾ ಹತೋಟಿಗೆ ತರುವ ದೃಷ್ಟಿಯಿಂದ ಧಾರವಾಡ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೆಲವೊಂದಿಷ್ಟು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿ ಲಾಕ್‌ಡೌನ್ ಜಾರಿ ಮಾಡಿದ್ದಾರೆ. ಆದರೆ ಈಗ ಅದರಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮದ್ಯ ಮಾರಾಟ ಹಾಗೂ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಯನ್ನೂ ರದ್ದುಗೊಳಿಸಿದ್ದ ಜಿಲ್ಲಾಧಿಕಾರಿಗಳು, ಜೂ.1ರಿಂದ 6 ರವರೆಗೆ ಮದ್ಯ ಮಾರಾಟ ಹಾಗೂ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅನುಮತಿ ನೀಡಿದ್ದಾರೆ. ಜೂ.1ರಿಂದ 6 ರವರೆಗೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ಗಂಟೆಯ ಅವಧಿಯಲ್ಲಿ […]

ಮದ್ಯ ಮಾರಾಟ ಅಧಿಕ ದರ ವಸೂಲಿ ಮಾಡಿದರೆ ಲೈಸನ್ಸ್ ರದ್ದು : ಸಚಿವರ ಎಚ್ಚರಿಕೆ

Friday, May 8th, 2020
KotaSrinivas

ಮಂಗಳೂರು  : ಜಿಲ್ಲೆಯ ಮದ್ಯದಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ನಡೆದ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಅಧಿಕ ದರ ವಸೂಲಿ ಮಾಡುವ ಪ್ರಕರಣ ಕಂಡು ಬಂದರೆ ಅಂತಹ ಮದ್ಯದಂಗಡಿಗಳ ಪರವಾನಿಗೆ ರದ್ದುಪಡಿಸಲು ಸೂಚನೆ ನೀಡಿದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಎಲ್ಲಾ […]

ಶಾಲಾ ಪರಿಸರದಲ್ಲಿ ಮದ್ಯ ಮಾರಾಟ-ಓರ್ವನ ಸೆರೆ

Tuesday, February 9th, 2016
liquor chandrahasa 48

ಉಪ್ಪಳ: ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಲಭಿಸಿದ ದೂರಿನ ಮೇರೆಗೆ ಅಬಕಾರಿ ಪೋಲೀಸರು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟದ ಮೂಲ ಸೂತ್ರದಾರನಾದ ಓರ್ವನನ್ನು ಬಂಧಿಸುವಲಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪಳ ಪಚ್ಲಂಪಾರೆಯ ಚಂದ್ರಹಾಸ(48)ಬಂಧಿತ ಆರೋಪಿ.ಈತನಿಂದ 180 ಮಿಲ್ಲಿಯ 48 ಮದ್ಯ ಬಾಟಲಿಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್ ಬಕೇಟ್ ನಲ್ಲಿ ತುಂಬಿಸಿ ಮದ್ಯ ಮಾರಾಟ ಮಾಡುತ್ತಿರುವ ಮಧ್ಯೆ ಆರೋಪಿಯನ್ನು ಚಾಣಾಕ್ಷತನದಿಂದ ಸೆರೆಹಿಡಿಯಲಾಗಿದೆ.ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಸಲಾಗುತ್ತಿದೆಯೆಂಬ ಊರವರ ನಿರಂತರ ದೂರಿನ ಪರಿಣಾಮ […]

‘ಎಣ್ಣೆ’ ಮೇಲೆ ಅಬಕಾರಿ ಇಲಾಖೆ ಕಣ್ಣು

Thursday, March 13th, 2014
Alcohol

ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಹರಿಯಬಹುದಾದ ಹೆಂಡದ ಹೊಳೆಗೆ ಅಣೆಕಟ್ಟೆ ಕಟ್ಟಲು ಅಬಕಾರಿ ಇಲಾಖೆ ಕಸರತ್ತು ಆರಂಭಿಸಿದೆ. ಮದ್ಯ ಮಾರಾಟ ಮತ್ತು ಸಾಗಣೆ ಮೇಲೆ ಇಲಾಖೆ ಇದೇ ಪ್ರಥಮ ಬಾರಿಗೆ ‘ಎಸ್‌ಎಂಎಸ್ ಅಸ್ತ್ರ’ ಬಳಸಲು ತೀರ್ಮಾನಿಸಿದೆ. ಅಂದರೆ ಪ್ರತಿ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯ, ಅದು ಸಾಗಣೆಯಾಗುವ ರೀತಿ ಮತ್ತು ಮದ್ಯದ ಅಂಗಡಿಗಳು ನಡೆಸುವ ಮಾರಾಟದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯಲಿದೆ. ಡಿಸ್ಟಿಲರಿಗಳು ಮದ್ಯ ಉತ್ಪಾದಿಸಿ, ಅದನ್ನು ಹಂಚಿಕೆ ಮಾಡುವವರೆಗೂ ನಡೆಯುವ ಚಟುವಟಿಕೆ ತಿಳಿಯಲು ಎಲ್ಲಾ ಡಿಸ್ಟಿಲರಿಗಳಲ್ಲೂ ಸಿಸಿ […]