ಬ್ಯಾರಿ ಅಧ್ಯಯನ ಕೇಂದ್ರಕ್ಕೆ ‘ಡಾ. ವಹಾಬ್’ ಹೆಸರು.

7:26 PM, Monday, October 4th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಡಾ. ವಹಾಬ್ ಶ್ರಾದ್ದಾಂಜಲಿಮಂಗಳೂರು: ಶುಕ್ರವಾರ ಮುಂಜಾನೆ ನಿಧನರಾದ ಹಿರಿಯ ಸಂಶೋಧಕ ಸಾಹಿತಿ, ಲೇಖಕ ವಹಾಬ್ ದೊಡ್ಡ ಮನೆ ಅವರ ಹೆಸರನ್ನು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ನ ಅಧೀನದಲ್ಲಿರುವ ಬ್ಯಾರಿ ಅಧ್ಯಯನ ಕೇಂದ್ರಕ್ಕಿಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ನ್ಯಾಯವಾದಿ ಬಿ.ಎ ಮಹ್ಮಮದ್ ಹನೀಫ್ ಘೋಷಿಸಿದ್ದಾರೆ.
ಪರಿಷತ್ ಕಛೇರಿಯಲ್ಲಿ ಸಂಜೆ ನಡೆದ ಡಾ| ವಹಾಬ್ ದೊಡ್ಡಮನೆ ಅವರ ಶ್ರಾದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬ್ಯಾರಿ, ಭಾಷೆ, ಜನಾಂಗ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಪಾರ ಒಲವು ತೋರಿಸುತ್ತಿದ್ದ ಡಾ| ವಹಾಬ್ ಪರಿಷತ್ ಅಧೀನದಲ್ಲಿ ಅಧ್ಯಯನ ಕೇಂದ್ರ ತೆರೆಯಲು ಸಲಹೆ ನೀಡಿದ್ದನ್ನು ನೆನಪಿಸಿದರು, ಅವರ ಸ್ಮರಣಾರ್ಥ ‘ಡಾ| ವಹಾನ್ ದೊಡ್ಡಮನೆ ಸ್ಮಾರಕ ಬ್ಯಾರಿ ಅಧ್ಯಯನ ಕೇಂದ್ರ ಕಾರ್ಯಚರಿಸಲಿದೆ ಎಂದು ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಅಝೀಝ್ ಬೈಕಂಪಾಡಿ, ಮತ್ತು ಹಂಝ್ ಮಲಾರ್, ಬಂಟ್ವಾಳ ಪುಸಭೆಯ ಸದಸ್ಯ ರಿಯಾಝ್ ಬಂಟ್ವಾಳ, ಉಳ್ಳಾಲ ದರ್ಗಾ ಉಪಾಧ್ಯಕ್ಷರಾದ ರಶೀದ್ ಉಳ್ಳಾಲ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತ್ ನ ಉಪಾಧ್ಯಕ್ಷ ಬಿ.ಎ. ಅಕ್ಬರ್ ಆಲಿ, ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್, ಪತ್ರಕರ್ತ ಅಹ್ಮದ್ ಅನ್ವರ್, ಇಮ್ತಿಯಾಜ್ ಅವರು ಡಾ| ವಹಾಬ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ವಹಾಬ್ ರ ಹಿರಿಯ ಆಪ್ತರಾದ ಇಸ್ಮಾಯಿಲ್ ಕೈಕಂಬ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಯೋಸುಫ್ ವಕ್ತಾರ, ಮಾಜಿ ಕರ್ಪೊರೇಟರ್ ಮುಹ್ಮಮದ್ ಕುಂಜತ್ತ್ ಬೈಲ್, ಅಬ್ದುಲ್ ಅಝೀಝ್ ಹಕ್, ಹುಸೈನ್ ಕಾಟಿಪಳ್ಳ, ಬಶೀರ್ ಕಿನ್ಯಾ, ಎಂ. ಜಿ. ರಹೀಂ, ಇಕ್ಬಾಲ್, ಅಹ್ಮದ್ ಕುತ್ತಾರ್, ಆಲಿ ಕುಂಞ ಪಾರೆ, ಅಝೀಝ್ ಬಜ್ಪೆ, ಎಂ.ಕೆ ಖಾದರ್, ಡಾ| ವಹಾಬ್ ರ ಮಕ್ಕಳಾದ ತಾಝೀಬ್, ತೊಹೇಬ್, ಅಕೀಬ್, ಅಳಿಯ ಶಫೀರ್ ಮತ್ತಿತರು ಹಾಜರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English