ಬ್ಯಾರಿ ಪರಿಷತ್, ಮಂಗಳೂರು ಅಧ್ಯಕ್ಷ ಕೋವಿಡ್ ಸೋಂಕಿಗೆ ಬಲಿ

Friday, May 7th, 2021
Aboobakkar

ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್, ಮಂಗಳೂರು ಇದರ ಅಧ್ಯಕ್ಷ ಅಬೂಬಕರ್ ಪಲ್ಲಮಜಲು(48) ಕೋವಿಡ್-19 ಸೋಂಕಿನ ಚಿಕಿತ್ಸೆ ಫಲಿಸದೆ  ಶುಕ್ರವಾರ ಬೆಳಗ್ಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು  ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಇವರು ಹಲವು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು ಅಲ್ಲದೆ ಪಲ್ಲಮಲಜು ಹಯಾತುಲ್ ಇಸ್ಲಾಂ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು […]

ಬ್ಯಾರಿ ಅಧ್ಯಯನ ಕೇಂದ್ರಕ್ಕೆ ‘ಡಾ. ವಹಾಬ್’ ಹೆಸರು.

Monday, October 4th, 2010
ಡಾ. ವಹಾಬ್ ಶ್ರಾದ್ದಾಂಜಲಿ

ಮಂಗಳೂರು: ಶುಕ್ರವಾರ ಮುಂಜಾನೆ ನಿಧನರಾದ ಹಿರಿಯ ಸಂಶೋಧಕ ಸಾಹಿತಿ, ಲೇಖಕ ವಹಾಬ್ ದೊಡ್ಡ ಮನೆ ಅವರ ಹೆಸರನ್ನು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ನ ಅಧೀನದಲ್ಲಿರುವ ಬ್ಯಾರಿ ಅಧ್ಯಯನ ಕೇಂದ್ರಕ್ಕಿಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ನ್ಯಾಯವಾದಿ ಬಿ.ಎ ಮಹ್ಮಮದ್ ಹನೀಫ್ ಘೋಷಿಸಿದ್ದಾರೆ. ಪರಿಷತ್ ಕಛೇರಿಯಲ್ಲಿ ಸಂಜೆ ನಡೆದ ಡಾ| ವಹಾಬ್ ದೊಡ್ಡಮನೆ ಅವರ ಶ್ರಾದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬ್ಯಾರಿ, ಭಾಷೆ, ಜನಾಂಗ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಪಾರ ಒಲವು ತೋರಿಸುತ್ತಿದ್ದ ಡಾ| ವಹಾಬ್ […]