ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ಮನೋ ವೈದ್ಯ ರೊಬ್ಬರನ್ನು ತಲಘಟ್ಟಪುರ ಪಿಎಸ್ ಐ ಶ್ರೀನಿವಾಸ್ ತಂಡ ಬಂಧಿಸಿದೆ.
ಆರೋಪಿ ರೇಷ್ಮಾ ಮನೋ ವೈದ್ಯೆ ದಂಪತಿ ಗಳಿಗೆ ಮಗು ಮಾಡಿಕೊಡೊದಾಗಿ 15 ಲಕ್ಷ ರೂಪಾಯಿ ಹಣ ಪಡೆದಿದ್ದಳು. ದಂಪತಿಯ ಮೊದಲ ಮಗು ಬುದ್ದಿ ಮಾಂದ್ಯತೆಯಿಂದ ಇದ್ದು. ಆ ಮಗುವಿಗೆ ಆರೋಪಿ ಡಾಕ್ಟರ್ ರೇಷ್ಮಾ ಚಿಕಿತ್ಸೆ ನೀಡುತ್ತಿರುತ್ತಾರೆ. ಆಗ ನಿಮ್ಮದೇ ಮಗು ಮಾಡಿಕೊಡೊದಾಗಿ ಪತಿ, ಪತ್ನಿಯ ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡಿದ್ದಳು.
2020 ರಲ್ಲಿ ಹಣ ಪಡೆದ ವೈದ್ಯೆ ಅಂಡಾಣು ಮತ್ತು ವೀರ್ಯಾಣು ಬೇರೆ ಮಹಿಳೆಗೆ ಇಂಜೆಕ್ಟ್ ಮಾಡಿದ್ದೇನೆ. ಮಗು ಬೆಳೆಯುತ್ತಿದೆ ಎಂದು ಹೇಳುತ್ತಲೇ ಬರುತ್ತಿದ್ದಳು. ದಂಪತಿಯ ಒತ್ತಡ ಹೆಚ್ಚಾದಾಗ ಮಗು ಕಳ್ಳತನ ಮಾಡಿಕೊಂಡು ಹೋಗಿ ದಂಪತಿ ಮಡಿಲಿಗೆ ಸೇರಿಸಿದ್ದಳು ಎನ್ನಲಾಗಿದೆ. ಕಳ್ಳತನ ಮಾಡಿಕೊಂಡು ಮಗು ದಂಪತಿಗೆ ಕೊಟ್ಟ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂಧಿಸಲಾಗಿದೆ.
ಘಟನೆ ನಡೆದದ್ದು ಕಳೆದ ವರ್ಷ ಮೇ 29, 2020ರಲ್ಲಿ. ಮಗು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ವೈದ್ಯೆ 2021 ಮೇ 29 ರಂದು ಅಂದರೆ ಅದೇ ದಿನಾಂಕದಂದು ಪೊಲೀಸರ ಬಲೆಗೆ ಬಿದ್ದಿರೋದು ವಿಶೇಷ. ಘಟನೆ ಬಳಿಕ ಆರೋಪಿಯನ್ನ ಎಲ್ಲಿ ಹುಡುಕಿದರೂ ಮಾಹಿತಿ ಸಿಗುತ್ತಿರಲಿಲ್ಲ. ಪೊಲೀಸರು ಆರು ತಿಂಗಳ ಬಳಿಕ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಕಳೆದ ಮೂರ್ನಾಲ್ಕು ದಿನದಿಂದ ಆರೋಪಿ ಟವರ್ ಲೊಕೇಷನ್ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿ ರೇಷ್ಮಾಳನ್ನ ತಲಘಟ್ಟಪುರ ಪಿಎಸ್ ಐ ಶ್ರೀನಿವಾಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಕಳ್ಳತನ ಮಾಡಿಕೊಂಡು ಹೋಗಿದ್ದ ಮಗುವನ್ನ ಮಗುವಿನ ತಂದೆ ತಾಯಿಗೆ ತಲುಪಿಸಲಾಗಿದೆ. ಸದ್ಯ ಪೊಲೀಸರ ವಶದಲ್ಲಿರೋ ಆರೋಪಿಗೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ಸಂಪೂರ್ಣ ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗ ಆಗುವ ಸಾಧ್ಯತೆಗಳಿವೆ.
Click this button or press Ctrl+G to toggle between Kannada and English