ಬಂಟ್ವಾಳ : ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ಮಂಗಗಳು ಅನ್ನವಿಲ್ಲದೆ ಉಪವಾಸದಿಂದ ನರಳಾಡುತ್ತಿದೆ.
ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಕಿಟ್ ಗಳನ್ನು ಕೊಡುವ ದಾನಿಗಳು, ಈ ಮಂಗಗಳಿಗೆ ಆಹಾರ ನೀಡಿದರೆ ಕೊಂಚ ಪ್ರಾಣಿ ದಯೆಯಾದರೂ ಬರಬಹುದು. ಅಲ್ಲದೆ ಕಾರಿಂಜದಲ್ಲಿ ಮಂಗಗಳ ಆಕರ್ಷಣೆ ಯಿಂದ ಅವುಗಳನ್ನು ದೇವ ಸ್ವರೂಪಿ ಎಂದು ನಂಬಿಕೆಯಿಂದ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಕಾಣಿಕೆ ಹಾಕಿದ ದುಡ್ಡಿನಿಂದಾದರೂ ಅವುಗಳಿಗೆ ಅನ್ನದಾನ ಮಾಡಬಹುದು.
ಈಗ ಕೊರೊನಾ ಲಾಕ್ ಡೌನ್ ನ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರಿಲ್ಲದ ಪರಿಣಾಮ ಅಲ್ಲಿರುವ ಮಂಗಗಳಿಗೂ ಅದರ ಬಿಸಿ ತಟ್ಟಿದೆ. ಜನರಿಲ್ಲದೆ ಬಿಕೋ ಎನ್ನುತ್ತಿರುವ ಕಾರಿಂಜ ದೇವಾಲಯದಲ್ಲಿ ನೂರಾರು ಮಂಗಗಳು ಆಹಾರಕ್ಕಾಗಿ ಒದ್ದಾಡುತ್ತಿವೆ. ಹಸಿವನ್ನು ತಾಳಲಾರದೆ ದೇವಸ್ಥಾನ ದ ಅಂಗದಲ್ಲಿ ಹೊರಲಾಡುತ್ತಿರುವ ಮಂಗವೊಂದಾದರೆ, ದೊಡ್ಡ ಮಂಗಗಳು ತಿಂದು ಉಳಿದ ಅನ್ನದ ಕಾಳುಗಳನ್ನು ಮರಿಗಳು ತಿನ್ನುವ ದೃಶ್ಯ ಕಾರಿಂಜದಲ್ಲಿ ಕಂಡು ಬಂದಿದೆ.
ಈಶ್ವರ ದೇವಾಲಯದಲ್ಲಿ ದೇವರ ನೈವೇದ್ಯ ಮಾಡಲು ಉಪಯೋಗಿಸುವ ಮೂರು ಕೆ.ಜಿ.ಅಕ್ಕಿಯ ಅನ್ನವನ್ನು ಮಂಗಗಳಿಗೆ ಆಹಾರದ ರೂಪದಲ್ಲಿ ಹಾಗೂ ಪಾರ್ವತಿ ದೇವಾಲಯ ದಲ್ಲಿ ಎರಡು ಕೆ.ಜಿ.ಅಕ್ಕಿಯ ನೈವೇದ್ಯ ಪ್ರಸಾದವನ್ನು ಇಲ್ಲಿರುವ ಮಂಗಗಳಿಗೆ ನೀಡುಲಾಗುತ್ತಿದೆ.
ಕೆಳಗೆ ತೀರ್ಥಬಾವಿಯ ಬಳಿ ಇರುವ ಮಂಗಗಳಿಗೆ ಈ ಪ್ರಸಾದ ಸಿಗುವುದಿಲ್ಲ. ಭಕ್ತರು ನೀಡಿದ ತಿನಿಸುಗಳೇ ಮಂಗಗಳಿಗೆ ಅಹಾರ.
ಲಾಕ್ ಡೌನ್ ನಿಂದ ಭಕ್ತರಿಲ್ಲದೆ ಮಂಗಗಳ ಹೊಟ್ಟೆಗೆ ಆಹಾರವಿಲ್ಲ. ದೇವಾಲಯದ ಬಳಿಯಲ್ಲಿ ಇರುವ ಮಂಗಗಳಿಗೆ ದೇವಾಲಯದ ಲ್ಲಿ ನೀಡುವ ನೈವೇದ್ಯ ಪ್ರಸಾದ ಸಾಕಾಗದೆ ಭಕ್ತರು ನೀಡುವ ಆಹಾರಕ್ಕೆ ಕೈ ಒಡ್ಡುತ್ತದೆ.
Click this button or press Ctrl+G to toggle between Kannada and English
June 3rd, 2021 at 19:18:46
Hi