ಲಾಕ್ ಡೌನ್ : ಶ್ರೀ ಕ್ಷೇತ್ರ ಕಾರಿಂಜದಲ್ಲಿ ಅನ್ನ ಆಹಾರವಿಲ್ಲದೆ ನರಳಾಡುತ್ತಿದೆ ವಾನರ ಸಂತತಿ

Tuesday, June 1st, 2021
vanara

ಬಂಟ್ವಾಳ :  ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ಮಂಗಗಳು ಅನ್ನವಿಲ್ಲದೆ ಉಪವಾಸದಿಂದ ನರಳಾಡುತ್ತಿದೆ. ಲಾಕ್ ಡೌನ್  ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಕಿಟ್ ಗಳನ್ನು ಕೊಡುವ ದಾನಿಗಳು, ಈ ಮಂಗಗಳಿಗೆ ಆಹಾರ ನೀಡಿದರೆ ಕೊಂಚ ಪ್ರಾಣಿ ದಯೆಯಾದರೂ ಬರಬಹುದು. ಅಲ್ಲದೆ ಕಾರಿಂಜದಲ್ಲಿ ಮಂಗಗಳ ಆಕರ್ಷಣೆ ಯಿಂದ ಅವುಗಳನ್ನು ದೇವ ಸ್ವರೂಪಿ ಎಂದು ನಂಬಿಕೆಯಿಂದ  ಸಾವಿರಾರು  ಭಕ್ತರು ಬಂದು ದೇವರ ದರ್ಶನ ಪಡೆದು ಕಾಣಿಕೆ ಹಾಕಿದ ದುಡ್ಡಿನಿಂದಾದರೂ ಅವುಗಳಿಗೆ ಅನ್ನದಾನ ಮಾಡಬಹುದು. ಈಗ ಕೊರೊನಾ ಲಾಕ್ ಡೌನ್ […]

ಕಾರಿಂಜೇಶ್ವರ ದೇವಸ್ಥಾನದ ಎಡ ಪಾರ್ಶ್ವದ ಕಲ್ಲಿನ ತಡೆಗೋಡೆ ಕುಸಿದು ಹಾನಿ

Wednesday, October 14th, 2020
Karinje

ಮಂಗಳೂರು : ಧಾರಾಕಾರ ಸುರಿದ ಮಳೆಗೆ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕುಸಿದು ಬಿದ್ದಿದೆ. ಈಶ್ವರ (ಶ್ರೀ ಕಾರಿಂಜೇಶ್ವರ) ದೇವಸ್ಥಾನದ ಎಡ ಪಾರ್ಶ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು, ಬುಧವಾರ ಬೆಳಗ್ಗೆ ಸಿಬ್ಬಂದಿಗಳ ಗಮನಕ್ಕೆ ಬಂದಿದೆ.ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸಲಾಗುತ್ತಿದ್ದು, ಅಂಗಣದ ಇಂಟರ್ ಲಾಕ್ ಕಿತ್ತುಹೋಗಿದೆ. ದೇವಸ್ಥಾನ ಬೃಹತ್ ಬಂಡೆಯ ಮೇಲೆ ಸ್ಥಾಪಿತಗೊಂಡಿದ್ದು, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿದೆ. ಕುಸಿದ ಭಾಗದ ಕೆಳಭಾಗದಲ್ಲಿ […]