ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಬೇಕೆನ್ನುವ ರಾಜಕೀಯ ನಾಯಕರ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಹಿಂದೆ ಭೂಮಾಫಿಯಾ ಕೈವಾಡ ಶಂಕೆ ಕೇಳಿಬಂದಿದೆ.
ಕರೊನಾ ನಡುವೆಯೂ ಭೂ ಅಕ್ರಮದ ದೂರುಗಳಿಗೆ ಸಂಬಂಧಿಸಿದ ಫೈಲ್ಗಳನ್ನು ವಿಲೇವಾರಿ ಮಾಡುವ ಪ್ರಯತ್ನಕ್ಕೆ ರೋಹಿಣಿ ಸಿಂಧೂರಿ ಕೈಹಾಕಿ ಭೂಗಳ್ಳರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ರಿಯಲ್ ಎಸ್ಟೇಟ್ ಉದ್ಯಮಿಗಳ ಹಿಂದೆಯೂ ರೋಹಿಣಿ ಬಿದ್ದಿದ್ದಾರೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕು ಶುರುವಾಗಿದ್ದು, ಕ್ರಮಕ್ಕೂ ಮುನ್ನವೇ ಅವರನ್ನು ವರ್ಗಾವಣೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಬೇಕೆನ್ನುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ರೋಹಿಣಿ ಸಿಂಧೂರಿ ವಿರುದ್ಧದ ಆಕ್ರೋಶದ ಹಿಂದೆ ಅನೇಕ ಅನುಮಾನಗಳು ಇದೀಗ ಭುಗಿಲೆದ್ದಿದೆ.
Click this button or press Ctrl+G to toggle between Kannada and English