ಆದಾಯ ತೆರಿಗೆ ಪಾವತಿದಾರರು ಅರ್ಹತೆ ಇದ್ದರೆ ಬಿಪಿಯಲ್ ಕಾರ್ಡ್ ಹೊಂದಬಹುದು

9:31 PM, Thursday, June 3rd, 2021
Share
1 Star2 Stars3 Stars4 Stars5 Stars
(No Ratings Yet)
Loading...

Ration cardಮಂಗಳೂರು : ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿದಾರರ ಮಾಹಿತಿಯನ್ನು ರಾಜ್ಯ ಸರ್ಕಾರದ ಆಹಾರ ಇಲಾಖೆಯು ಪಡೆದಿದ್ದು, ಆದಾಯ ತೆರಿಗೆ ಪಾವತಿದಾರರು ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ಹಲವಾರು ಕುಟುಂಬಗಳ ಅಂತ್ಯೋದಯ ಅನ್ನ (AAY) ಅಥವಾ ಆದ್ಯತಾ ಪಡಿತರ ಚೀಟಿಗಳು (BPL) ಎ.ಪಿ.ಎಲ್.ಗೆ ಪರಿವರ್ತನೆ ಹೊಂದಿದ್ದು, ಈ ಪೈಕಿ ಯಾವುದಾದದರೂ ತಾಂತ್ರಿಕ ಅಥವಾ ಇನ್ನಿತರ ಕಾರಣಗಳಿಗೆ ನೈಜ ಪ್ರಕರಣಗಳಲ್ಲಿ ಅರ್ಹ ಬಿಪಿಎಲ್ ಕುಟುಂಬಗಳ ಪಡಿತರ ಚೀಟಿ ಎ.ಪಿ.ಎಲ್‍ಗೆ ಪರಿವರ್ತನೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಮರು ಪರಿಶೀಲಿಸಲು ಅವಕಾಶ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗು ಮಾನ್ಯ ಆಹಾರ ಮಂತ್ರಿಗಳನ್ನು ಕೋರಿದ ಹಿನ್ನಲೆಯಲ್ಲಿ ಸರಕಾರವು ಅಂತಹ ಪ್ರಕರಣಗಳಿದ್ದಲ್ಲಿ ಮರುಪರಿಶೀಲಿಸಲು ಆದೇಶ ಹೊರಡಿಸಿದೆ.

ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಯಾವುದಾದರೂ ಕುಟುಂಬಗಳು ನೈಜವಾಗಿ ಸರ್ಕಾರ ನಿಗದಿಪಡಿಸಿರುವ BPL ಮಾನದಂಡಗಳ ವ್ಯಾಪ್ತಿಯ ಒಳಗಡೆಯಿದ್ದು, ಅಂತ್ಯೋದಯ ಅನ್ನ (AAY) ಅಥವಾ ಆದ್ಯತಾ ಪಡಿತರ ಚೀಟಿ(BPL) ಹೊಂದಲು ಅರ್ಹರಾಗಿದ್ದರೆ, ಅಂತಹವರು ದಾಖಲೆಗಳ ಸಮೇತ ಆಹಾರ ಶಾಖೆಯಲ್ಲಿ ಮನವಿ ಅರ್ಜಿ ಸಲ್ಲಿಸಬಹುದಾಗಿದೆ. ಇದರ ನೈಜತೆಯನ್ನು ಪರಿಶೀಲಿಸಿ ಆದಾಯ ತೆರಿಗೆ ಇಲಾಖೆಯಿಂದ ಸ್ಪಷ್ಟನೆ ಪಡೆದು ಕ್ರಮ ಕೈಗೊಳ್ಳಲಾಗುವುದು.

ಆದಾಯ ತೆರಿಗೆ ಪಾವತಿದಾರ ಪಟ್ಟಿಯಲ್ಲಿ ಬಂದಿರುವ ಎ.ಪಿ.ಎಲ್.ಗೆ ಪರಿವರ್ತನೆ ಹೊಂದಿರುವವರು ಮನವಿ ಅರ್ಜಿಯೊಂದಿಗೆ ( with details & explanation), ಪ್ಯಾನ್ ಕಾರ್ಡ್ ಪ್ರತಿ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಆದಾಯ ತೆರಿಗೆ ವರದಿ (Income tax returns submitted form copy) ರೇಷನ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಂಗಳೂರು ನಗರ ಹಾಗೂ ಎಲ್ಲಾ ತಾಲೂಕು ಕಚೇರಿಗಳಲ್ಲಿರುವ ಆಹಾರ ಶಾಖೆಗೆ ಕೂಡಲೇ ಮನವಿ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ಬಿಪಿಎಲ್ ಕಾರ್ಡ್‌ಗೆ ಸಿಗುವ ಸರಕಾರಿ ಸವಲತ್ತುಗಳೇನು?

* ಒಂದು ಲಕ್ಷ ಮೌಲ್ಯದ ಭಾಗ್ಯಲಕ್ಷ್ಮಿ ಬಾಂಡ್

* ಆಶ್ರಯ ಸೇರಿ ವಸತಿ ಯೋಜನೆ ಸಹಾಯಧನ

* ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

* ಸಾಮಾಜಿಕ ಭದ್ರತೆಯಡಿ ಮಾಸಿಕ ಪಿಂಚಣಿ

* ಆರೋಗ್ಯ ವಿಮೆ ಸೌಲಭ್ಯ

* ಪರಿಶಿಷ್ಟ ಜಾತಿ-ಪಂಗಡ, ಓಬಿಸಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ

* ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ

* ಗಂಗಾ-ಕಲ್ಯಾಣ ಯೋಜನೆಯಡಿ ಕೊಳವೆಬಾವಿ

* ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English